ETV Bharat / state

ನಶಿಸಿ ಹೋದ ಪದ್ಧತಿಯನ್ನು ಮರುಬಳಕೆ ಮಾಡಿ : ಕೃಷಿ ವೈದ್ಯಾಧಿಕಾರಿಯ ಸಲಹೆ - farming

ನಶಿಸಿ ಹೋದ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳನ್ನು ನಾವು ಮತ್ತೆ ಮರುಬಳಕೆ ಮಾಡಿಕೊಳ್ಳುವ ಮೂಲಕ ಕೃಷಿಯಲ್ಲಿ ಉತ್ತಮ ಸಾಧನೆ ಹೇಗೆ ಮಾಡಬಹುದು ಎಂದು ಕೃಷಿ ವೈದ್ಯಾಧಿಕಾರಿ ಡಾ. ಹೆಚ್.ಮಂಜುನಾಥ್ ಮಾಹಿತಿ ನೀಡಿದರು.

ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಕೃಷಿ ವೈದ್ಯಾಧಿಕಾರಿ ಡಾ ಹೆಚ್ ಮಂಜುನಾಥ್
author img

By

Published : May 2, 2019, 8:24 AM IST

ತುಮಕೂರು: ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲೂ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳು ಆಚರಣೆಯಲ್ಲಿದ್ದವು. ಆದರೆ, ಈಗ ನಶಿಸಿದ್ದು, ಅದು ಪುನರ್​ ಸ್ಥಾಪನೆ ಆಗಬೇಕಿದೆ ಎಂದು ಕೃಷಿ ವೈದ್ಯಾಧಿಕಾರಿ ಡಾ. ಹೆಚ್.ಮಂಜುನಾಥ್ ಹೇಳಿದರು.

ತುಮಕೂರಿನ ವಿಜ್ಞಾನ ಕೇಂದ್ರದಲ್ಲಿ ಸಹಜ ಬೇಸಾಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ವಾಯುಗುಣ ವೈಪರಿತ್ಯದ ನಡುವೆ ಯಶಸ್ವಿ ಬೇಸಾಯ' ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಕೃಷಿ ವೈದ್ಯಾಧಿಕಾರಿ ಡಾ. ಹೆಚ್.ಮಂಜುನಾಥ್

ಇಂದು ವ್ಯವಸಾಯ ಯಶಸ್ವಿಯಾಗಲು ಸ್ಥಳೀಯ ದತ್ತಾಂಶಗಳು ಅಗತ್ಯ. ಹಾಗಾಗಿ ರೈತರು ಅದನ್ನು ಸಂಗ್ರಹಿಸುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸಿ ಬಳಸುವ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕಿದೆ. ಮಳೆ ಪ್ರಮಾಣ, ಗಾಳಿ ಬೀಸುವ ದಿಕ್ಕು, ಕೃಷಿ ಭೂಮಿಯಲ್ಲಿರುವ ತೇವಾಂಶ, ಸೂರ್ಯನ ಶಾಖ, ದಿನದಿಂದ ದಿನಕ್ಕೆ ಬದಲಾಗುವ ತಾಪಮಾನ ಹೀಗೆ ವಾಯುಗುಣ ವೈಪರಿತ್ಯಗಳಿಗೆ ಹೊಂದಿಕೆಯಾಗುವ ಬೇಸಾಯ ಮಾಡಿ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಇಲ್ಲವಾದರೆ ರೈತರು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸುವ ಅಂಶ ಹೆಚ್ಚಶಗಿರುತ್ತದೆ ಎಂದರು.

ಈ ಕಾರ್ಯಾಗಾರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಕೇವಲ ರೈತರಷ್ಟೇ ಅಲ್ಲದೆ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

Intro:ತುಮಕೂರು: ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲೂ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳು ಆಚರಣೆಯಲ್ಲಿದ್ದವು, ಆದರೆ ಈಗ ನಶಿಸಿದ್ದು, ಅದು ಪುನರ್ ಸ್ಥಾಪನೆ ಆಗಬೇಕಿದೆ ಎಂದು ಕೃಷಿ ವೈದ್ಯಾಧಿಕಾರಿ ಡಾ. ಹೆಚ್ ಮಂಜುನಾಥ್ ತಿಳಿಸಿದರು.

Body:ತುಮಕೂರಿನ ವಿಜ್ಞಾನ ಕೇಂದ್ರದಲ್ಲಿ ಸಹಜ ಬೇಸಾಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ವಾಯುಗುಣ ವೈಪರೀತ್ಯದ ನಡುವೆ ಯಶಸ್ವಿ ಬೇಸಾಯ' ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ವ್ಯವಸಾಯ ಯಶಸ್ವಿಯಾಗಲು ಸ್ಥಳೀಯ ದತ್ತಾಂಶಗಳು ಅಗತ್ಯ, ಹಾಗಾಗಿ ರೈತರು ಅದನ್ನು ಸಂಗ್ರಹಿಸುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸಿ ಬಳಸುವ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕಿದೆ.
ಮಳೆ ಪ್ರಮಾಣ, ಗಾಳಿ ಬೀಸುವ ದಿಕ್ಕು, ಕೃಷಿ ಭೂಮಿಯಲ್ಲಿರುವ ತೇವಾಂಶ, ಸೂರ್ಯನ ಶಾಖ, ದಿನದಿಂದ ದಿನಕ್ಕೆ ಬದಲಾಗುವ ತಾಪಮಾನ ಹೀಗೆ ವಾಯುಗುಣ ವೈಪರೀತ್ಯಗಳಿಗೆ ಹೊಂದಿಕೆಯಾಗುವ ಬೇಸಾಯ ಮಾಡಿ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ, ಇಲ್ಲವಾದರೆ ರೈತರು ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸುವ ಅಂಶ ಹೆಚ್ಚಶಗಿರುತ್ತದೆ ಎಂದರು.
ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳು ಆಚರಣೆಯಲ್ಲಿದ್ದವು, ಆದರೆ ಕಾಲ ಕಳೆದಂತೆ ಅವುಗಳು ನಶಿಸಿ ಹೋಗಿವೆ ನಾವು ಮತ್ತೆ ಅ ಯೋಜನೆಯನ್ನು ಮರುಬಳಕೆ ಮಾಡಿಕೊಳ್ಳುವ ಮೂಲಕ ಕೃಷಿಯಲ್ಲಿ ಉತ್ತಮ ಸಾಧನೆ ಹೇಗೆ ಮಾಡಬಹುದು ಎಂದು ಪಿ ಪಿ ಟಿ ಆ ಮೂಲಕ ಮಾಹಿತಿ ನೀಡಿದರು.

Conclusion:ಈ ಕಾರ್ಯಗಾರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಕೇವಲ ರೈತರಷ್ಟೇ ಅಲ್ಲದೆ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.