ETV Bharat / state

ತುಮಕೂರಿನಲ್ಲಿ ಚಿನ್ನಾಭರಣಕ್ಕಾಗಿ ಮಹಿಳೆ ಕೊಲೆ ಮಾಡಿದ ದುಷ್ಕರ್ಮಿಗಳು

ಮಹಿಳೆಯೊಬ್ಬರು ತೋಟದಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಏಕಾಏಕಿ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ತುಮಕೂರು ತಾಲೂಕು ದೊಡ್ಡತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ.

ತುಮಕೂರಿನಲ್ಲಿ ಚಿನ್ನಾಭರಣಕ್ಕಾಗಿ ಮಹಿಳೆ ಕೊಲೆಗೈದ ದುಷ್ಕರ್ಮಿಗಳು
author img

By

Published : Nov 2, 2019, 10:34 AM IST

ತುಮಕೂರು: ತೋಟದಿಂದ ವಾಪಸ್ ಮನೆಗೆ ಬರುತ್ತಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ತುಮಕೂರು ತಾಲೂಕು ದೊಡ್ಡತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ.

ತುಮಕೂರಿನಲ್ಲಿ ಚಿನ್ನಾಭರಣಕ್ಕಾಗಿ ಮಹಿಳೆ ಕೊಲೆಗೈದ ದುಷ್ಕರ್ಮಿಗಳು

ಭಾಗ್ಯ (35) ಕೊಲೆಗೀಡಾದ ಮಹಿಳೆ. ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಮಹಿಳೆ ಮೈಮೇಲಿದ್ದ ಚಿನ್ನಾಭರಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೊಲೆಗೀಡಾಗಿರುವ ಭಾಗ್ಯ ಅವರು ಹಿರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಎಂಬ ಪತ್ನಿಯಾಗಿದ್ದಾರೆ. ತೋಟದಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಏಕಾಏಕಿ ಅಡ್ಡಗಟ್ಟಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತುಮಕೂರು ಗ್ರಾಮಾಂತರ ಭಾಗದಲ್ಲಿ ಬಹಿರಂಗವಾಗಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಇಸ್ಪೀಟ್ ದಂಧೆಕೋರರು ಈ ಭಾಗದಲ್ಲಿ ಓಡಾಡುತ್ತಿರುವುದು ಸಾಮಾನ್ಯವಾಗಿದ್ದು ಅವರುಗಳೇ ಮಹಿಳೆಯನ್ನು ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.

ಚಿನ್ನಾಭರಣವನ್ನು ಕಳವು ಮಾಡಲು ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ಕೊಲೆ ಕೃತ್ಯ ನಡೆದಿದೆ. ಇಸ್ಪೀಟ್ ದಂಧೆಯ ಗ್ಯಾಂಗ್ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:nullBody:TumakuruConclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.