ETV Bharat / state

ಜಿಲ್ಲೆಯಲ್ಲಿ 90 ಕ್ರಷರ್​​​ಗಳ ಮೇಲೆ ಹದ್ದಿನ ಕಣ್ಣು: ಎಸ್ಪಿ ವಂಶಿಕೃಷ್ಣ

ತುಮಕೂರು ಜಿಲ್ಲಿಯಲ್ಲಿ ಸುಮಾರು 135 ಕ್ರಷರ್​​​ಗಳಿದ್ದು, ಅದರಲ್ಲಿ 90 ಚಾಲ್ತಿಯಲ್ಲಿವೆ. ಅಕ್ರಮ ಸ್ಫೋಟಕಗಳ ಸಂಗ್ರಹದ ಬಗ್ಗೆ ನಿರಂತರಾಗಿ ಪರಿಶೀಲನೆ ನಡೆಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿ ಕೃಷ್ಣ ತಿಳಿಸಿದ್ದಾರೆ.

author img

By

Published : Mar 19, 2021, 7:30 AM IST

SP Vamsi Krishna

ತುಮಕೂರು: ಜಿಲ್ಲೆಯಲ್ಲಿ 135 ಕ್ರಷರ್​​​ಗಳಿದ್ದು, ಅದರಲ್ಲಿ 90 ಚಾಲ್ತಿಯಲ್ಲಿವೆ. ಅಕ್ರಮ ಸ್ಫೋಟಕಗಳ ಸಂಗ್ರಹದ ಬಗ್ಗೆ ನಿರಂತರಾಗಿ ಜಂಟಿ ಸರ್ವೇ ಮೂಲಕ ಕ್ರಷರ್​​​ಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿ ಕೃಷ್ಣ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿ ಕೃಷ್ಣ ಸುದ್ದಿಗೋಷ್ಠಿ

ತಿಪಟೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಫೋಟಕ ಸಾಮಗ್ರಿಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ತಿಪಟೂರು ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರೈತರ ಜಮೀನು ಭೂ ಸ್ವಾಧೀನಪಡಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.

ಅಗತ್ಯ ಪರಿಹಾರ ನೀಡುವ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದ್ದು, ಪರಿಹಾರ ಕೇಳಿದ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಲ್ಲ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ರೈತರು ಗಲಾಟೆ ಮಾಡಿಕೊಂಡ ಸಂದರ್ಭದಲ್ಲಿ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಪೂರ್ವತರವಾದ ಉದ್ದೇಶವಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.