ತುಮಕೂರು: ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕೆಂದರೂ ಲಸಿಕೆ ಸಿಗದ ಕಾರಣ ಆಯುರ್ವೇದಿಕ್ ಔಷಧಿಗಳ ಮೊರೆಹೋಗಿದ್ದಾರೆ.
ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರನ್ನು ಮೂಂಚೂಣಿ ವಾರಿಯರ್ಸ್ ಎಂದು ಪರಿಗಣಿಸಿ ವ್ಯಾಕ್ಸಿನ್ ನೀಡುವಂತೆ ಸಾಕಷ್ಟು ಬಾರಿ ಜಿಲ್ಲಾಡಳಿತವನ್ನು ಕೋರಲಾಗಿದೆ. ಇದಕ್ಕೆ ಮನವಿಗೆ ಮಾನ್ಯತೆ ದೊರೆತಿಲ್ಲ , ಹೀಗಾಗಿ ವಿಧಿ ಇಲ್ಲದೆ ಆರೋಗ್ಯದ ದೃಷ್ಟಿಯಿಂದ ಸಂಸ್ಥೆ ಆಯುರ್ವೇದಿಕ್ ಔಷಧಿಗಳ ಮೊರೆ ಹೋಗಿದೆ.
ಎರಡು ತರಹದ ಆಯುರ್ವೇದಿಕ್ ಮಾತ್ರೆಗಳು ರೋಗನಿರೋಧಕ ಚೂರ್ಣ ಹಾಗೂ ಲೇಹ್ಯವನ್ನು ತನ್ನ ಸ್ವಯಂ ಸೇವಕರಿಗೆ ರೆಡ್ ಕ್ರಾಸ್ ನೀಡುತ್ತಿದೆ. ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಅಗತ್ಯವಿರುವ ಔಷಧಿ ಹಾಗೂ ಆಹಾರವನ್ನು ಸಹ ರೆಡ್ ಕ್ರಾಸ್ನ ಸ್ವಯಂ ಸೇವಕರು ಸರಬರಾಜು ಮಾಡುತ್ತಿದ್ದಾರೆ.
ಓದಿ:'ಬ್ಲಾಕ್ ಫಂಗಸ್'ಕ್ಕಿಂತಲೂ ಅಪಾಯಕಾರಿ ಈ 'ವೈಟ್ ಫಂಗಸ್'... ಯಾರಿಗೆ ಹೆಚ್ಚು ತೊಂದರೆ!?