ತುಮಕೂರು: ತಾತ್ಕಾಲಿಕವಾಗಿ ನಗರದ ಬಾಳನಕಟ್ಟೆ ರಸ್ತೆ ಬದಿಯಲ್ಲಿ ಹಣ್ಣು ಮತ್ತು ಹೂ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ವ್ಯಾಪಾರ ಮಾಡಲು ವಿನಾಯಕ ಮಾರುಕಟ್ಟೆಯ ತರಕಾರಿ ವ್ಯಾಪಾರಸ್ಥರು ಬಿಡುತಿಲ್ಲ ಎಂದು ಅಲ್ಲಿನ ವ್ಯಾಪಾರಸ್ಥರು ಆರೋಪಿದ್ದಾರೆ.
ನಗರದ ಗುಬ್ಬಿ ವೀರಣ್ಣ ರಂಗಮಂದಿರದ ರಸ್ತೆಯಲ್ಲಿ ಹಣ್ಣು ಮತ್ತು ಹೂಗಳನ್ನು ಕಳೆದ ೨೫ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ವ್ಯಾಪಾರಸ್ಥರು ಜೀವನ ಸಾಗಿಸುತಿದ್ದರು, ಕಳೆದ ವಾರದಿಂದ ಆ ಮಾರ್ಗದಲ್ಲಿ ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ಸ್ಥಾಪಿಸಿರುವುದರಿಂದ ಅಲ್ಲಿ ವ್ಯಾಪರ ಮಾಡುತಿದ್ದ ವ್ಯಾಪರಸ್ಥರಿಗೆ ವಿನಾಯಕ ಮಾರುಕಟ್ಟೆ ಬಳಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮನ್ನು ಅಲ್ಲಿಂದ ಬೇರೆ ಕಡೆಗೆ ವ್ಯಾಪಾರ ಮಾಡಲು ಕಳುಹಿಸಿದರು. ಪರ್ಯಾಯ ಜಾಗಕ್ಕಾಗಿ ಶಾಸಕರಾದ ಜ್ಯೋತಿಗಣೇಶ್ ಅವರನ್ನು ಕೇಳಿಕೊಂಡಾಗ ಸಿದ್ದಿವಿನಾಯಕ ಮಾರುಕಟ್ಟೆ ಬಳಿ ತಾತ್ಕಾಲಿಕವಾಗಿ ನೀವು ವ್ಯಾಪಾರ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದ್ದರಿಂದ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿಯೇ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಆದರೆ ಈಗ ವಿನಾಯಕ ಮಾರುಕಟ್ಟೆಯ ತರಕಾರಿ ವ್ಯಾಪಾರಸ್ಥರು ನಮ್ಮಗೆ ಇಲ್ಲಿ ವ್ಯಾಪಾರ ಮಾಡಲು ಬಿಡದೇ, ವಿನಾಯಕ ನಗರದ ರಸ್ತೆ ಬದಿ ವ್ಯಾಪಾರ ಮಾಡಿ ಎಂದು ಒತ್ತಾಯಿಸುತಿದ್ದಾರೆ. ಇದರಿಂದ ನಮಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಫ್ರೂಟ್ ಯೂನಿಯನ್ ಅಧ್ಯಕ್ಷರಾದ, ಕುದ್ದೂಸ್ ಅಹಮದ್ ಒತ್ತಾಯಿಸಿದರು