ETV Bharat / state

ತುಮಕೂರಲ್ಲಿ ಜಿಲ್ಲಾಡಳಿತ ನೀಡಿದ ವಾಹನದ ಪಾಸ್ ದುರ್ಬಳಕೆ - tumkuru corona case

ತುಮಕೂರಲ್ಲಿ ಈ ಪಾಸ್​ಗಳು ದುರ್ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಇಂದು ವ್ಯಕ್ತಿಯೊಬ್ಬರ ವಾಹನದ ಪಾಸ್​ ಪರಿಶೀಲಿಸಿದಾಗ ಗುಬ್ಬಿ ಶಾಸಕರ ಹೆಸರಲ್ಲಿ ಪಾಸ್ ಬಳಸಿರುವುದು ಪತ್ತೆಯಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಶಾಸಕ ಹುದ್ದೆಯನ್ನು ರಮೇಶ್ ಎಂಬುವರು ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

vehicle Pass misuse  in Tumkur issued by the district administration
ತುಮಕೂರಲ್ಲಿ ಜಿಲ್ಲಾಡಳಿತ ನೀಡಿದ ವಾಹನದ ಪಾಸ್ ದುರ್ಬಳಕೆ
author img

By

Published : Apr 16, 2020, 11:23 PM IST

ತುಮಕೂರು: ಲಾಕ್​ಡೌನ್ ಅಗತ್ಯವಿರುವ ವೈದ್ಯರು ಸೇರಿದಂತೆ ಕೆಲವು ಆಯ್ದ ವಾಹನಗಳಿಗೆ ಮಾತ್ರ ಪಾಸ್ ವಿತರಿಸಲಾಗಿತ್ತು. ಇನ್ನು ತುಮಕೂರಲ್ಲಿ ಈ ಪಾಸ್​ಗಳು ದುರ್ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಇಂದು ವ್ಯಕ್ತಿಯೊಬ್ಬರ ವಾಹನದ ಪಾಸ್​ ಪರಿಶೀಲಿಸಿದಾಗ ಗುಬ್ಬಿ ಶಾಸಕರ ಹೆಸರಲ್ಲಿ ಪಾಸ್ ಬಳಸಿರುವುದು ಪತ್ತೆಯಾಗಿದೆ.

ಎನ್.ರಮೇಶ್ ಎಂಬುವರ ಹೆಸರಿನಲ್ಲಿ, ಪದ ನಾಮ- ಶಾಸಕರು ಗುಬ್ಬಿ, ಕಚೇರಿ- ಗುಬ್ಬಿ ಎಂದು ಗುರುತಿನ ಪತ್ರದಲ್ಲಿ ನಮೂದಾಗಿದೆ. ಆದರೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಶಾಸಕ ಹುದ್ದೆಯನ್ನು ರಮೇಶ್ ಎಂಬುವರು ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.