ETV Bharat / state

ತುಮಕೂರು: ಲಾರಿ-ಕ್ಯಾಂಟರ್​ ಅಪಘಾತ; ಗ್ರಾ.ಪಂಚಾಯತ್​ ಸದಸ್ಯ ಸೇರಿ ಇಬ್ಬರು ಸಾವು

Two people died in an accident in Tumakuru: ತುಮಕೂರಿನಲ್ಲಿ ಲಾರಿ ಮತ್ತು ಕ್ಯಾಂಟರ್​ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ.

accident
ಅಪಘಾತಗೊಂಡಿರುವ ಕ್ಯಾಂಟರ್​ ವಾಹನ
author img

By ETV Bharat Karnataka Team

Published : Dec 10, 2023, 6:57 AM IST

Updated : Dec 10, 2023, 10:17 AM IST

ತುಮಕೂರು: ಲಾರಿ ಹಾಗೂ ಕ್ಯಾಂಟರ್​ ಮಧ್ಯೆ ಅಪಘಾತ ನಡೆದು ಕ್ಯಾಂಟರ್​ನಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಿತ್ರದುರ್ಗ ಜಿಲ್ಲೆ ಮೊಳಕಾನ್ಮೂರು ತಾಲೂಕು ಬೆಲ್ಲದಾರಹಟ್ಟಿಯ ಗ್ರಾಮ ಪಂಚಾಯತ್​ ಸದಸ್ಯ ಮುನಿಸ್ವಾಮಿ (52) ಹಾಗೂ ಕ್ಯಾಂಟರ್ ಚಾಲಕ ರಾಕೇಶ್ (35) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ನಗರದ ಹೊರವಲಯದ ಊರುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆಯಿತು.

ಮುನಿಸ್ವಾಮಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಬೆಂಗಳೂರಿನ ಮಾರುಕಟ್ಟೆ ತೆಗೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಕ್ಯಾಂಟರ್​ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್​ ಮುಂಭಾಗ ನಜ್ಜುಗುಜ್ಜಾಗಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ಚಿಕಿತ್ಸೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ ಅಪಘಾತ; ಶಿಶು ಸಹಿತ ಗರ್ಭಿಣಿ ಸಾವು

ಇತ್ತೀಚಿನ ಪ್ರಕರಣಗಳು- ನಿಂತಿದ್ದ ಟ್ರ್ಯಾಕ್ಟರ್‌ಗೆ ಆಂಬ್ಯುಲೆನ್ಸ್​ ಡಿಕ್ಕಿ: ವಿಜಯಪುರದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಗರ್ಭದಲ್ಲಿದ್ದ ಶಿಶುಸಹಿತ ಗರ್ಭಿಣಿ ಸಾವನ್ನಪ್ಪಿರುವ ಘಟನೆ 9/12/23 (ಶನಿವಾರ) ನಡೆದಿತ್ತು. ಗರ್ಭಿಣಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಅಲ್ಲಿಂದ ಉತ್ತಮ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್​ನಲ್ಲಿ ಕರೆದೊಯ್ಯುವಾಗ ಹೂವಿನ ಹಿಪ್ಪರಗಿ ಬಳಿ ನಿಂತಿದ್ದ ಟ್ರ್ಯಾಕ್ಟರ್​ಗೆ ಆ್ಯಂಬುಲೆನ್ಸ್​ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ತಾಯಿ ಮತ್ತು ಗರ್ಭದಲ್ಲಿನ ಶಿಶು ಸಾವನ್ನಪ್ಪಿದ್ದು, ಚಾಲಕ ಸಿಬ್ಬಂದಿ ಗಾಯಗೊಂಡಿದ್ದಾರೆ.

ಟಾಟಾ ಏಸ್ ವಾಹನ ಪಲ್ಟಿ: ಮೈಸೂರಲ್ಲಿ 8/12/23(ಶುಕ್ರವಾರ)ರಂದು ಟಾಟಾ ಏಸ್ ವಾಹನ ಪಲ್ಟಿಯಾಗಿ ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ, ನಾಗಣಪುರ ಕಾಲೋನಿಯ ಮಾರ್ಗವಾಗಿ ಮಕ್ಕಳನ್ನು ಟಾಟಾಏಸ್​ ವಾಹನ ಕರೆದೊಯ್ಯುತ್ತಿತ್ತು. ಚಾಲಕನ ಅಜಾಗರೂಕತೆ ಚಾಲನೆಯಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ವಾಹನದಲ್ಲಿದ್ದ 9 ವಿದ್ಯಾರ್ಥಿನಿಯರಲ್ಲದೆ, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕಕ್ಕೆ ರವಾನಿಸಿ ದಾಖಲಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 10, 2023, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.