ETV Bharat / state

ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್​ಗೆ ಡಿಕ್ಕಿಯಾದ ಕಾರು.. ಸವಾರರಿಬ್ಬರು ಸ್ಥಳದಲ್ಲೇ ಸಾವು

ವಾಹನಗಳಿಗೆ ದಂಡ ವಿಧಿಸುತ್ತಿದ್ದ ಪೊಲೀಸರ ಕಂಡು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ ಈ ಅಪಘಾತ ಎಸಗಿದ್ದಾನೆ ಎಂದು ಅಲ್ಲಿದ್ದ ಸ್ಥಳೀಯರು ಆರೋಪಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ..

two-died-in-an-accident-when-the-car-tries-to-escape-from-police-in-tumkur
ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್​ಗೆ ಡಿಕ್ಕಿಯಾದ ಕಾರು
author img

By

Published : Oct 27, 2021, 5:42 PM IST

ತುಮಕೂರು : ಕಾರು ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಬಳುವನೇರಲು ಗೇಟ್​​ನಲ್ಲಿ ನಡೆದಿದೆ.
ಮೃತರನ್ನು ಬಳುವನೆರಲು ಗ್ರಾಮದ ನಾಗಣ್ಣ (65), ಬಿ ಮುದ್ದನಹಳ್ಳಿ ಗ್ರಾಮದ ಚಿದಾನಂದ (55) ಎಂದು ಗುರುತಿಸಲಾಗಿದೆ. ಬಳುವನೇರಲು ಗ್ರಾಮದ ಕಡೆಯಿಂದ ತಿಪಟೂರಿಗೆ ತೆರಳುತ್ತಿದ್ದ ಬೈಕ್​ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯರು

‘ಘಟನೆಗೆ ಪೊಲೀಸರೇ ಕಾರಣ’

ವಾಹನಗಳಿಗೆ ದಂಡ ವಿಧಿಸುತ್ತಿದ್ದ ಪೊಲೀಸರ ಕಂಡು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ ಈ ಅಪಘಾತ ಎಸಗಿದ್ದಾನೆ ಎಂದು ಅಲ್ಲಿದ್ದ ಸ್ಥಳೀಯರು ಆರೋಪಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಜೊತೆಗೆ ಘಟನಾ ಸ್ಥಳದಲ್ಲಿಯೇ ಶವಗಳನ್ನಿರಿಸಿ ಪ್ರತಿಭಟನೆ ನಡೆಸಿದ್ದು, ಇಬ್ಬರ ಸಾವಿಗೆ ಪೊಲೀಸರೆ ನೇರ ಹೊಣೆ ಎಂದು ಆರೋಪಿಸಿದರು. ಸಂಬಂಧಪಟ್ಟವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್ ಜಯಲಕ್ಷ್ಮಮ್ಮ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಇದನ್ನೂ ಓದಿ: ಬೈಕ್-ಶಾಲಾ ವಾಹನ ನಡುವೆ ಭೀಕರ ಅಪಘಾತ : ಬೈಕ್ ಸವಾರರಿಬ್ಬರ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.