ETV Bharat / state

ಸ್ನಾತಕೋತ್ತರ ಪದವಿ ಫಲಿತಾಂಶ ವಿಳಂಬ: ವಿದ್ಯಾರ್ಥಿಗಳಲ್ಲಿ ಆತಂಕ - Tumkur University

ತುಮಕೂರು ವಿಶ್ವವಿದ್ಯಾನಿಲಯದಿಂದ ಸೆಮಿಸ್ಟರ್​ಗಳ ಫಲಿತಾಂಶ ವಿಳಂಬ - ವಿದ್ಯಾರ್ಥಿಗಳ ಶುಲ್ಕ ಬಾಕಿಯೇ ಫಲಿತಾಂಶ ನೀಡದಿರಲು ಕಾರಣ

Tumkur University
ತುಮಕೂರು ವಿಶ್ವವಿದ್ಯಾನಿಲಯ
author img

By

Published : Dec 29, 2022, 11:53 AM IST

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಒಂದಲ್ಲ ಇನ್ನೊಂದು ಕಾರಣಕ್ಕೆ ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗುತ್ತಲೇ ಸಾಗಿದೆ. ಈಗ ಸ್ನಾತಕೋತ್ತರ ಪದವಿಯ 2ನೇ ಹಾಗೂ 4ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದೇ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿವಿಗಳು ಫಲಿತಾಂಶ ನೀಡುವುದನ್ನು ವಿಳಂಬ ಮಾಡುತ್ತಿರುವ ಬಗ್ಗೆ ವಿಧಾನ ಮಂಡಳ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೇ ಉತ್ತರವನ್ನೂ ನೀಡಿದ್ದಿದೆ.

ಸಾಕಷ್ಟು ಕೋರ್ಸ್‌ಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ: ಪರೀಕ್ಷೆ ನಡೆದು ಮೂರು ತಿಂಗಳಾಗಿದ್ದು, ಮೌಲ್ಯಮಾಪನ ಪೂರ್ಣಗೊಂಡು ಎರಡು ತಿಂಗಳು ಕಳೆದಿದೆ. ಆದರೆ ಈವರೆಗೂ ಫಲಿತಾಂಶ ನೀಡಿಲ್ಲ. ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಹೊರ ಬಂದಿದ್ದರೂ ಫಲಿತಾಂಶಕ್ಕಾಗಿ ಪರದಾಡುವುದು ಮಾತ್ರ ತಪ್ಪಿಲ್ಲ. ಅಂಕಪಟ್ಟಿ, ಇತರ ದಾಖಲೆಗಳು ಇಲ್ಲದೇ ಉದ್ಯೋಗಕ್ಕೂ ಪ್ರಯತ್ನ ನಡೆಸುವುದು ಕಷ್ಟಕರವಾಗಿದೆ.

ಕೇಂದ್ರ, ರಾಜ್ಯ ಸರ್ಕಾರ, ಇತರೆ ಸಾರ್ವಜನಿಕ ಸಂಸ್ಥೆಗಳು ಉದ್ಯೋಗಕ್ಕೆ ಅರ್ಜಿ ಕರೆದಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಸೇರಿದಂತೆ ಇತರ ಸೌಲಭ್ಯ ಪಡೆಯಲು ಅಂಕಪಟ್ಟಿ ಇಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ಅವಧಿ ಡಿ.31ಕ್ಕೆ ಕೊನೆಗೊಳ್ಳುತ್ತಿದ್ದು, ಈ ಸೌಲಭ್ಯದಿಂದಲೂ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಒಂದೆರಡು ದಿನದಲ್ಲಿ ಫಲಿತಾಂಶ ಪ್ರಕಟಿಸಿದರೂ ತಕ್ಷಣಕ್ಕೆ ಅಂಕಪಟ್ಟಿ ಸಿಗುವುದಿಲ್ಲ. ಅಂಕಪಟ್ಟಿ ಪಡೆದುಕೊಂಡು ಅರ್ಜಿ ಸಲ್ಲಿಸುವುದರ ಒಳಗೆ ಸಮಯ ಮೀರಿರುತ್ತದೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಬಾರಿ ಪ್ರೋತ್ಸಾಹ ಧನ ಪಡೆಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಸಿಗದ ಫಲಿತಾಂಶ: ಸ್ನಾತಕೋತ್ತರ ಪದವಿಯ ಎರಡನೇ ಸೆಮಿಸ್ಟರ್ ಜೊತೆಗೆ ಅಂತಿಮ ಪದವಿಯ ಕನ್ನಡ, ಇಂಗ್ಲಿಷ್, ಇತಿಹಾಸ, ಸಾರ್ವಜನಿಕ ಆಡಳಿತ, ಮನಃಶಾಸ್ತ್ರ, ಪತ್ರಿಕೋದ್ಯಮ ವಿಭಾಗ, ಎಂಎಸ್‌ಡಬ್ಲ್ಯೂ, ಹಾಗೂ ಇತರ ವಿಭಾಗಗಳ ಫಲಿತಾಂಶ ಹೊರ ಬಂದಿಲ್ಲ. ಸಾಮಾನ್ಯವಾಗಿ ಸ್ನಾತಕೋತ್ತರ ಪದವಿಯ ಪರೀಕ್ಷೆಗಳು ನಡೆದ ಕೆಲವೇ ವಾರಗಳಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತವೆ.

ಆದರೆ, ತುಮಕೂರು ವಿ.ವಿಯಲ್ಲಿ ಮೌಲ್ಯಮಾಪನ ಮುಗಿದು ಎರಡು ತಿಂಗಳಾಗಿದ್ದರೂ ಫಲಿತಾಂಶ ನಮ್ಮ ಕೈಸೇರಿಲ್ಲ. ಇಂತಹ ಅವ್ಯವಸ್ಥೆ ಹಿಂದಿನ ವರ್ಷಗಳಲ್ಲೂ ನಡೆದಿದ್ದು, ಈಗಲೂ ಮುಂದುವರಿದಿದೆ. ಶೈಕ್ಷಣಿಕ, ಆಡಳಿತ ಎರಡೂ ವಿಚಾರದಲ್ಲೂ ವಿ.ವಿ ಹಿನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುಲ್ಕ ಪಾವತಿಸಿಲ್ಲ ಸ್ಪಷ್ಟನೆ: ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ನ ಶೇ 75ರಷ್ಟು ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಲಾಗಿದೆ. 7 ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಬೇಕಿದೆ. ವಿದ್ಯಾರ್ಥಿಗಳು ಶುಲ್ಕ ಬಾಕಿ ಉಳಿಸಿಕೊಂಡಿರುವುದರಿಂದ ಪ್ರಕಟಿಸಿಲ್ಲ. ಆಯಾ ವಿಭಾಗಗಳ ಮುಖ್ಯಸ್ಥರು ಫಲಿತಾಂಶ ಪ್ರಕಟಿಸುವಂತೆ ಕೋರಿಕೊಂಡರೆ ನೀಡಲಾಗುವುದು ಎಂದು ವಿ.ವಿ ಕುಲಸಚಿವ (ಮೌಲ್ಯಮಾಪನ) ಪ್ರೊ. ನಿರ್ಮಲರಾಜು ತಿಳಿಸಿದರು. ಇನ್ನೂ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿ ಕೊಂಡಿರುವುದರಿಂದ ಎರಡನೇ ಸೆಮಿಸ್ಟರ್ ಫಲಿತಾಂಶ ಮತ್ತಷ್ಟು ತಡವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ತುಮಕೂರು: ಕೆಂಪಾಪುರ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕಿಯರು ಸಾವು, ಸೃಷ್ಟಿ ಹಬ್ಬದಂದು ಮಡುಗಟ್ಟಿದ ಶೋಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.