ETV Bharat / state

ತುಮಕೂರು: ಮೊಬೈಲ್​ ಆ್ಯಪ್​ ಮುಖೇನ ಅನಗತ್ಯ ವಾಹನ ಓಡಾಟಕ್ಕೆ ಬ್ರೇಕ್​ - tumkur police news

ತುಮಕೂರು ಪೊಲೀಸರು 'ಇ ಸುಬಾಹು' ಎಂಬ ಮೊಬೈಲ್​ ಆ್ಯಪ್​ ಬಳಸಿಕೊಂಡು ಜಿಲ್ಲೆಯಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ.

tumkur-police
ತುಮಕೂರು ಪೊಲೀಸ್
author img

By

Published : Apr 27, 2020, 8:37 PM IST

ತುಮಕೂರು: ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳನ್ನು ನಿಯಂತ್ರಿಸಲು ‘ತುಮಕೂರು ಇ ಸುಬಾಹು’ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.

ಮೊದಲಿಗೆ ತಿಪಟೂರು ಉಪವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ತುಮಕೂರು ನಗರದ ಎಲ್ಲ ಚೆಕ್ ಪೋಸ್ಟ್​ ಹಾಗೂ ರಾಷ್ಟ್ರೀಯ ಹೆದ್ದಾರಿ ಚೆಕ್ ಪೋಸ್ಟ್​​ಗಳಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ತುಮಕೂರು ಪೊಲೀಸ

ಚೆಕ್ ಪೋಸ್ಟ್​​ಗಳಲ್ಲಿನ ಪೊಲೀಸ್ ಸಿಬ್ಬಂದಿ ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡು, ಅನಗತ್ಯವಾಗಿ ಓಡಾಡುವ ವಾಹನಗಳ ಮಾಹಿತಿ ಕಲೆಹಾಕುವರು. ಈ ಅಪ್ಲಿಕೇಷನ್ ಕಳೆದ ಎರಡು ವರ್ಷದಿಂದ ಬಳಸಲಾಗುತ್ತಿದೆ. ಈಗ ಹೆಚ್ಚಿನ ತಂತ್ರಜ್ಞಾನ ಬಳಸಿಕೊಂಡು ವಾಹನಗಳ ಮಾಲೀಕರು ಯಾವ ಕಾರಣಕ್ಕೆ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಆ್ಯಪ್​ನಲ್ಲಿ ದಾಖಲಿಸುತ್ತಾರೆ ಎಂದರು.

ನಿತ್ಯ ವಾಹನಗಳ ದಾಖಲೆ ಪರಿಶೀಲಿಸುವುದರ ಜೊತೆಗೆ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.