ತುಮಕೂರು: ಮನೆಯಲ್ಲಿ ತಾವು ಹಣ್ಣನ್ನು ತಿಂದು ಅದರ ಬೀಜವನ್ನು ಹಾಗೆ ಎಸೆಯುತ್ತೇವೆ. ಆದರೆ, ಅದೇ ಬೀಜಗಳನ್ನು ಸಂಗ್ರಹಿಸಿ ಒಂದು ಕಾಡು ನಿರ್ಮಾಣ ಮಾಡಬಹುದು ಎಂಬುದನ್ನು ತೂಮಕೂರಿನ ಈ ವೃದ್ಧ ದಂಪತಿ ತೋರಿಸಿ ಕೊಟ್ಟಿದ್ದಾರೆ.
ಸರಸ್ವತಿ ನಗರದ ನಿವಾಸಿಯಾಗಿರುವ ಡಿ.ಎಸ್.ಪಂಡಿತ್ ಆರಾಧ್ಯ ಹಾಗೂ ಭ್ರಮರಾಂಭ ದಂಪತಿ ಕಳೆದೆರಡು ವರ್ಷದಿಂದ ತಮ್ಮ ಮನೆಯಲ್ಲಿ ತಿಂದ ಹಣ್ಣಿನ ಬೀಜಗಳನ್ನು ಸಂಗ್ರಹಣೆ ಮಾಡುತ್ತಾ ಬಂದಿದ್ದಾರೆ. ಈ ಬೀಜಗಳನ್ನು ಮಣ್ಣಿನಲ್ಲಿ ಉಂಡೆ ಮಾಡಿ, ಕಾಡಿಗೆ ಹೋಗಿ ಬಿತ್ತನೆ ಮಾಡಿ ಬರುತ್ತಿದ್ದಾರೆ. ಈ ಮೂಲಕ ಕಾಡನ್ನು ಬೆಳೆಸುವ ಉದ್ದೇಶವನ್ನು ಈ ದಂಪತಿ ಹೊಂದಿದೆ.
ಇವರು ಈಗಾಗಲೇ ಬೇಲ, ಪನ್ನೇರಲೆ, ಸೀತಾಫಲ, ಸೀಬೆ, ಹಲಸು, ಕಿತ್ತಲೆ ಹಣ್ಣಿನ ಬೀಜಗಳನ್ನು ಸಂಗ್ರಹ ಮಾಡಿ 300ಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ದೇವರಾಯನ ದುರ್ಗದ ಕಾಡಿನಲ್ಲಿ ಬಿತ್ತನೆ ಮಾಡಿದ್ದಾರೆ. ಅವು ಮರವಾಗಿ ಬೆಳೆದು ಸಮೃದ್ಧವಾದ ಕಾಡಾಗಿ ಬೆಳೆಯುತ್ತದೆ ಎಂಬುದು ವೃದ್ಧ ದಂಪತಿಯ ಆಶಯವಾಗಿದೆ.
ಓದಿ: ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ: ಅಂತ್ಯಕ್ರಿಯೆಗೆ ಯಶ್, ಮಾಜಿ ಸಿಎಂ ಸಿದ್ದರಾಮಯ್ಯ ಬರುವಂತೆ ಮನವಿ
ಪಂಡಿತ್ ಆರಾಧ್ಯರು ಸರ್ಕಾರಿ ನೌಕರಿಯಿಂದ ನಿವೃತ್ತಿಯಾದ ಬಳಿಕ ಅವರು ತಮ್ಮ ಪತ್ನಿಯ ಜೊತೆ ಸೇರಿ ಪ್ರತಿವರ್ಷ ಮರಗಿಡಗಳನ್ನು ನೆಡುವುದು ಸೇರಿದಂತೆ ಪರಿಸರ ಸಂರಕ್ಷಣೆಯ ಕಾರ್ಯ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಯಲದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.