ETV Bharat / state

ತುಮಕೂರಿನ ಲಕ್ಷ್ಮಣ ಹುಣಸೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ; ಇದರ ವಿಶೇಷತೆ ಗೊತ್ತೇ? - ಹುಣಸೆ ಹಣ್ಣು

ತುಮಕೂರು ಜಿಲ್ಲೆಯಲ್ಲಿ ಅಪರೂಪದ ಹುಣಸೆ ತಳಿ ಪತ್ತೆಯಾಗಿದ್ದು, ಅದಕ್ಕೆ ಗಿಡವನ್ನು ಪೋಷಿಸಿ ಬೆಳೆಸಿದ ಮಾಲೀಕನ ಹೆಸರನ್ನೇ ಇಡಲಾಗಿದೆ. ನಂದಿಹಳ್ಳಿ ಗ್ರಾಮದ ರೈತ ಲಕ್ಷ್ಮಣಪ್ಪ ಎಂಬುವರ ತೋಟದಲ್ಲಿನ ಹುಣಸೇವೆಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ.

Tumkur farmers lakshman planted special tamarind tree
ತುಮಕೂರಿನ ಲಕ್ಷ್ಮಣ ಹುಣಸೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ; ಇದರ ವಿಶೇಷತೆ ಹೀಗಿದೆ...
author img

By

Published : Jul 23, 2021, 5:20 PM IST

Updated : Jul 23, 2021, 7:43 PM IST

ತುಮಕೂರು: ತಾಲೂಕಿನ ನಂದಿಹಳ್ಳಿಯಲ್ಲಿ ಹೊಸ ಹುಣಸೆ ತಳಿಯನ್ನು ಪತ್ತೆ ಮಾಡಲಾಗಿದೆ. ವಿಶಿಷ್ಟ ಗುಣವನ್ನು ಹೊಂದಿರೋ ಈ ಹುಣಸೆ ಗಿಡವು ಬೇರೆಲ್ಲಾ ಮರಗಳಿಗಿಂತ ಯಥೇಚ್ಚವಾಗಿ ಫಸಲು ನೀಡುತ್ತಿದೆ. ಇರ ಹಣ್ಣಿನ ತೊಳೆ ಅಗಲವಾಗಿದ್ದು, ಆಕಾರದಲ್ಲಿ ದಪ್ಪವಾಗಿಯೂ ಇದೆ. ವಿಶೇಷ ಅಂದ್ರೆ ಬಿಳಿ ಬಣ್ಣದಿಂದ ಕೂಡಿದೆ. ತುಮಕೂರು ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿರುವ ಹುಣಸೆ ಇದಾಗಿದೆ.

ತುಮಕೂರಿನ ಲಕ್ಷ್ಮಣ ಹುಣಸೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ; ಇದರ ವಿಶೇಷತೆ ಗೊತ್ತೇ?

2020ರಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 42,500 ರೂ. ಬಿಕರಿಯಾಗಿತ್ತು. 2021ರಲ್ಲಿ ಕ್ವಿಂಟಾಲ್‌ಗೆ 35 ಸಾವಿರ ರೂ. ಗೆ ಮಾರಾಟವಾಗಿತ್ತು. ಪ್ರಸ್ತುತ ಅತ್ಯಧಿಕ ಬೆಲೆಗೆ ಮಾರಾಟವಾಗ್ತಿರೋ ಹುಣಸೆ ಹಣ್ಣು ಇದಾಗಿದೆ. 4 ದಶಕಗಳಿಂದ ಹುಣಸೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಲಕ್ಷ್ಮಣ ಅವರು, 4 ಬೀಜಗಳನ್ನು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಅದ್ರಲ್ಲಿ 2 ಬೀಜಗಳು ಮರಗಳಾಗಿ ಬೆಳೆದು ನಿಂತಿವೆ. ಅದರಲ್ಲಿ ಒಂದು ಹುಣಸೆ ಗಿಡವು ವಿಭಿನ್ನ ತಳಿಯಿಂದ ಕೂಡಿದೆ. ಇನ್ನೊಂದು ಸಾಮಾನ್ಯ ತಳಿಯಾಗಿ ಪರಿವರ್ತನೆಯಾಗಿದೆ.

ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಹುಣಸೆಯನ್ನು ಇರಿಸಲಾಗಿತ್ತು. ಹಣ್ಣಿನ ಗುಣಮಟ್ಟವನ್ನು ಪರೀಕ್ಷಿಸಿ 2021ರ ಮಾರ್ಚ್‌ನಲ್ಲಿ ಲಕ್ಷ್ಮಣ ಹುಣಸೆ ಎಂದೇ ನಾಮಕರಣ ಮಾಡಲಾಗಿದೆ. ಹಿರೇಹಳ್ಳಿಯಲ್ಲಿರುವ ಕೆವಿಕೆ ಮತ್ತು ಲಕ್ಷ್ಮಣ ಅವರ ನಡುವೆ ಒಪ್ಪಂದವಾಗಿದೆ. ಬೀಜದಿಂದ ಸಸಿ ತಯಾರಿಸಿ ಕಸಿ ಮಾಡಿ ಬೇರೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ರೈತ ಲಕ್ಷ್ಮಣ ಅವರಿಗೆ ಶೇ.60 ಮತ್ತು ಕೆವಿಕೆಗೆ ಶೇ.40ರಷ್ಟು ಸಸಿ ಲಭ್ಯವಾಗಲಿದೆ.

Last Updated : Jul 23, 2021, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.