ತುಮಕೂರು: ಜಿಲ್ಲೆಯಲ್ಲಿ ಮೊದಲ ದಿನ ಕೋವಿಡ್ ಲಸಿಕೆ ಪಡೆಯಲು 1,142 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 839 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.
ಜಿಲ್ಲೆಯ 13 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗಿತ್ತು. ಮುಖ್ಯವಾಗಿ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಶೇಕಡಾ 73ರಷ್ಟು ಲಸಿಕೆ ವಿತರಣೆ ಆಗಿದೆ.
ಶಿರಾ ತಾಲೂಕಿನ ಲಸಿಕಾ ಕೇಂದ್ರದಲ್ಲಿ 90 ಮಂದಿಯ ಪೈಕಿ 83 ಮಂದಿಗೆ ಅಂದರೆ ಅತಿ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಕೊರಟಗೆರೆ ತಾಲೂಕಿನಲ್ಲಿ 100 ಮಂದಿಯ ಪೈಕಿ 89 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ತುಮಕೂರು ತಾಲೂಕಿನ ತುರುವೇಕೆರೆ, ಪಾವಗಡ, ಶಿರಾ, ಮಧುಗಿರಿ, ಕುಣಿಗಲ್, ಕೊರಟಗೆರೆ, ಗುಬ್ಬಿ ಚಿಕ್ಕನಾಯಕನಹಳ್ಳಿಯಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು.