ETV Bharat / state

ಕಾಣೆಯಾಗಿದ್ದ ಬಾಲಕರು ಕೆರೆಯಲ್ಲಿ ಶವವಾಗಿ ಪತ್ತೆ... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಕಾಣೆಯಾಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಾಣೆಯಾಗಿದ್ದ ಬಾಲಕರು ಕೆರೆಯಲ್ಲಿ ಶವವಾಗಿ ಪತ್ತೆ
author img

By

Published : Oct 27, 2019, 2:12 PM IST

ತುಮಕೂರು: ನಿನ್ನೆಯಿಂದ ಕಾಣೆಯಾಗಿದ್ದ ಇಬ್ಬರು ಬಾಲಕರ ಮೃತದೇಹಗಳು ಇಂದು ಕೆರೆಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

ಮೃತ ಬಾಲಕರನ್ನು ಸಲ್ಮಾನ್ (9) ಹಾಗೂ ಮಾರುತಿ (9) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದ ಇಬ್ಬರು ಬಾಲಕರನ್ನು ಪೋಷಕರು ಹುಡುಕಾಡುತ್ತಿದ್ದರು. ಇಂದು ಬೆಳಗ್ಗೆ ಸಿಡಿಯಜ್ಜನಪಾಳ್ಯದ ಸಮೀಪದ ಕಟ್ಟೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

Two boys found dead in lake near shira
ಕಾಣೆಯಾಗಿದ್ದ ಬಾಲಕರು ಕೆರೆಯಲ್ಲಿ ಶವವಾಗಿ ಪತ್ತೆ

ಕೆರೆಯಲ್ಲಿ ಅಲ್ಲಲ್ಲಿ ಜೆಸಿಬಿಯಿಂದ ಬೇಕಾಬಿಟ್ಟಿಯಾಗಿ ಮಣ್ಣನ್ನು ತೆಗೆದಿರುವ ಪರಿಣಾಮ ಬಾಲಕರು ಈಜಲು ಹೋದ ವೇಳೆ ಮಣ್ಣಿನಡಿ ಸಿಲುಕಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಕ್ಕಳ ಮೃತದೇಹ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪಟ್ಟಣನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Intro:Body:ಈಜಲು ಹೋದ ಇಬ್ಬರು ಬಾಲಕರು ನೀರುಪಾಲು....

ತುಮಕೂರು
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಸಲ್ಮಾನ್(9),ಮಾರುತಿ(9) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದ ಇಬ್ಬರು ಬಾಲಕರನ್ನು ಪೋಷಕರು ಹುಡುಕಾಡುತ್ತಿದ್ರು.
ಇಂದು ಬೆಳಿಗ್ಗೆ ಸಿಡಿಯಜ್ಜನಪಾಳ್ಯದ ಸಮೀಪದ ಕಟ್ಟೆಯಲ್ಲಿ ಶವಗಳು ಪತ್ತೆಯಾಗಿವೆ. ಕೆರೆಯಲ್ಲಿ ಅಲ್ಲಲ್ಲಿ ಜೆಸಿಬಿಯಿಂದ ಬೇಕಾಬಿಟ್ಟಿಯಾಗಿ ಮಣ್ಣನ್ನು ತೆಗೆದಿರೋ ಪರಿಣಾಮ ಬಾಲಕರು ಈಜಲು ಹೋದ ವೇಳೆ ಮಣ್ಣಿನಡಿ ಸಿಲುಕಿಕೊಂಡು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಪಟ್ಟಣನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.