ತುಮಕೂರು : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರಿನ ಎಸ್‌ವಿಎಸ್ ಪಬ್ಲಿಕ್ ಸ್ಕೂಲ್ ಮುಂದೆ ಪೋಷಕರ ಜಮಾವಣೆಗೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ತುಮಕೂರು ನಗರದ ಎಸ್‌ವಿಎಸ್ ಕಾಲೇಜು ಮುಂಭಾಗ ಪೋಷಕರ ಗಲಾಟೆ ಮಾಡಿದರು. ಹಿಜಾಬ್ ಮತ್ತು ಬುರ್ಕಾ ಹಾಕಿದ ಪೋಷಕರನ್ನು ಒಳಗೆ ಬಿಡದೆ ಇದ್ದಿದ್ದಕ್ಕೆ ಪೋಷಕರು ಗಲಾಟೆ ಮಾಡಿದ್ದಾರೆ. ಕಾಲೇಜು ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಕಲಾ, ಇನ್ಸ್‌ಪೆಕ್ಟರ್ ಮುನಿರಾಜು ಭೇಟಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಶಾಲೆಯ ಸುತ್ತಮುತ್ತ144 ಸೆಕ್ಷನ್ ಜಾರಿ ಇದೆ. ಇದೇ ರೀತಿ ಮಾಡಿದ್ರೆ ನಾವು ಕೇಸ್ ಹಾಕ್ತಿವಿ ಅಂತಾ ಪೋಷಕರನ್ನು ಪೊಲೀಸರು ಚದುರಿಸಿದರು. ಶಾಲೆಗೆ ವಿದ್ಯಾರ್ಥಿಗಳನ್ನ ಬಿಡೋಕೆ ಅಂತಾ ಪೋಷಕರು ಬಂದಿದ್ದರು. ಅಲ್ಲದೆ ಈ ವೇಳೆ ಪೋಷಕರು ಬುರ್ಕಾ ಹಾಕಿಕೊಂಡು ಬರಬಾರ್ದು ಅಂತಾ ಶಾಲಾ ಆಡಳಿತ ಮಂಡಳಿ ಗಲಾಟೆ ಮಾಡಿದ್ದಾರೆ.
ಮಕ್ಕಳು ಶಾಲೆಗೆ ಹಿಜಾಬ್ ಹಾಕಿಕೊಂಡು ಬರ್ಬಾದು ಅಂತಾ ಹೈಕೋರ್ಟ್ ಆದೇಶ ಇದೆ. ಆದರೆ, ಪೋಷಕರು ಬುರ್ಕಾ ಧರಿಸಬಾರದು ಅಂತಾ ಹೈಕೋರ್ಟ್ ಆದೇಶ ಮಾಡಿದಿಯಾ ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಎಸ್‌ವಿಎಸ್ ಪಬ್ಲಿಕ್ ಶಾಲೆಯ ಮುಂಭಾಗ ಗದ್ದಲ ಉಂಟಾಯಿತು.
ಇದನ್ನೂ ಓದಿ: 'ಹಿಜಾಬ್ ತೆಗಿಸಬೇಡಿ'.. ಶಾಲಾ ಸಿಬ್ಬಂದಿ ಜೊತೆಗೆ ಸಾಮಾಜಿಕ ಹೋರಾಟಗಾರ್ತಿ ವಾಗ್ವಾದ