ETV Bharat / state

ವಾಹನ ಖರೀದಿಗೆ ತೆರಳಿ ಅವಮಾನಕ್ಕೊಳಗಾದ ತುಮಕೂರಿನ ಕೆಂಪೇಗೌಡನ ಮನೆಗೇ ಬಂತು ಮಹೀಂದ್ರಾ ಪಿಕಪ್! - ತುಮಕೂರು ಮಹೀಂದ್ರಾ ಶೋ ರೂಂ ವಿಚಾರ

ತುಮಕೂರಿನ ಮಹೀಂದ್ರಾ ಶೋ ರೂಂನಲ್ಲಿ ಅಪಮಾನ ಎದುರಿಸಿದ್ದ ರೈತ ಕೆಂಪೇಗೌಡನ ಮನೆಗೇ ಕಂಪನಿಯಿಂದ ವಾಹನ ಡೆಲಿವರಿ ಮಾಡಲಾಗಿದೆ.

tumakuru-farmer-gets-new-mahindra-vehicle
ಕೆಂಪೇಗೌಡನ ಮನೆಗೇ ಬಂತು ಮಹೀಂದ್ರಾ ಪಿಕಪ್
author img

By

Published : Jan 29, 2022, 11:02 PM IST

Updated : Jan 30, 2022, 5:49 AM IST

ತುಮಕೂರು: ನಗರದ ಮಹೀಂದ್ರಾ ಶೋ ರೂಂನಲ್ಲಿ ಅಪಮಾನ ಎದುರಿಸಿದ್ದ ರೈತ ಕೆಂಪೇಗೌಡನ ಮನೆಗೇ ಕಂಪನಿಯಿಂದ ವಾಹನ ಡೆಲಿವರಿ ಮಾಡಲಾಗಿದೆ. ಶುಕ್ರವಾರ (ಜ. 28) ರೈತನ ಮನೆಗೆ ವಾಹನ ಡೆಲಿವರಿ ಬಂದಿದೆ. ಈ ಬಗ್ಗೆ ಸ್ವತಃ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಕೂಡ ಟ್ವೀಟ್​ ಮಾಡಿದ್ದು, ನಮ್ಮ ಮಹೀಂದ್ರಾ ಕುಟುಂಬಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡ ಮಹೀಂದ್ರಾ ಗೂಡ್ಸ್ ವಾಹನ ಖರೀದಿ ಮಾಡಲು ತೆರಳಿದ್ದಾಗ ಅವಮಾನ ಮಾಡಿದ ಘಟನೆ ನಡೆದಿತ್ತು. ಈ ವೇಳೆ ಗ್ರಾಹಕ ಧರಿಸಿದ್ದ ಬಟ್ಟೆ ಕಂಡು ಶೋ ರೂಮ್​​ ಸಿಬ್ಬಂದಿ 10 ರೂಪಾಯಿ ಕೊಡುವ ಯೋಗ್ಯತೆ ಇಲ್ಲ. ವಾಹನ ತೆಗೆದುಕೊಳ್ಳಲು ಬಂದಿದೆಯಾ ಎಂದು ತನಗೆ ಹಿಯಾಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

tumakuru-farmer-gets-new-mahindra-vehicle
ಹೊಸ ಪಿಕಪ್​ ಜೊತೆ ರೈತ ಕೆಂಪೇಗೌಡ

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದರ ಬೆನ್ನಲ್ಲೇ ಅಪಮಾನಗೊಂಡ ಕೆಂಪೇಗೌಡ, ಬಳಿಕ ಒಂದು ಗಂಟೆ ಅವಧಿಯಲ್ಲಿ ಬರೋಬ್ಬರಿ 10 ಲಕ್ಷ ರೂ. ಹೊಂದಿಸಿ ವಾಹನ ಡೆಲಿವರಿ ಕೊಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದರ ನಡುವೆ ಅವಮಾನಗೊಂಡ ಕೆಂಪೇಗೌಡ ಪೊಲೀಸ್​​ ರಾಣೆಯಲ್ಲಿ ದೂರು ದಾಖಲಿಸಿದ್ದ. ಕೊನೆಗೆ ಪೊಲೀಸರು ಶೋ ರೂಮ್​​ ಸಿಬ್ಬಂದಿ ಹಾಗೂ ಅಲ್ಲಿನ ಅಧಿಕಾರಿಗಳಿಂದ ಕ್ಷಮೆಯಾಚನೆ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿದ್ದರು.

ಆನಂದ ಮಹೀಂದ್ರಾ ಟ್ವೀಟ್​: ಘಟನೆ ಬಗ್ಗೆ ತಿಳಿದಾಕ್ಷಣ ಟ್ವೀಟ್ ಮಾಡಿದ್ದ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಎಲ್ಲ ವ್ಯಕ್ತಿಗಳ ಘನತೆ ಎತ್ತಿ ಹಿಡಿಯುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಸಮುದಾಯಗಳು ಮತ್ತು ಎಲ್ಲ ಪಾಲುದಾರರಿಗೆ ಶಕ್ತಿ ತುಂಬುವುದು ಮಹೀಂದ್ರಾ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಈ ನಿರ್ಧಾರಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಸಾಧ್ಯವಿಲ್ಲ. ಈ ನೀತಿಗಳಿಗೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದರು.

ತುಮಕೂರಿನ ಕೆಂಪೇಗೌಡನ ಮನೆಗೇ ಬಂತು ಮಹೀಂದ್ರಾ ಪಿಕಪ್!

ಬಟ್ಟೆ ನೋಡಿ ಶೋ ರೂಮ್ ಸಿಬ್ಬಂದಿ ಅವಮಾನಿಸಿದ ಆರೋಪ: ಕೆರಳಿದ 'ಕೆಂಪೇಗೌಡ' ಮಾಡಿದ್ದೇನು?

ಇದೀಗ ರೈತನಿಗೆ ಶೋ ರೂಂ ಸಿಬ್ಬಂದಿ ವಾಹನ ಡೆಲಿವರಿ ಕೊಟ್ಟಿದ್ದಾರೆ. ಬೊಲೆರೋ ಪಿಕಪ್ ವಾಹನ ಖರೀದಿಸಿರುವ ಬಗ್ಗೆ ರೈತ ಕೆಂಪೇಗೌಡ ಸಂತಸ ವ್ಯಕ್ತಪಡಿಸಿದ್ದು, ಶೋಂ ರೂಂ ಸಿಬ್ಬಂದಿ ಮನೆಗೆ ಬಂದು ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಯಾರಿಗೂ ಕೂಡ ಈ ರೀತಿ ಆಗಬಾರದು ಎಂಬ ಉದ್ದೇಶ ನನ್ನದಾಗಿತ್ತು ಎಂದಿದ್ದಾರೆ.

ಸಂತಸದಿಂದಲೇ ಮನೆಗೆ ಪಿಕಪ್ ವಾಹನ ತಂದಿದ್ದೇನೆ. ಅವರೂ ಕೂಡ ಸಂತಸದಿಂದಲೇ ಡೆಲಿವರಿ ಕೊಟ್ಟಿದ್ದಾರೆ. 9.40 ಲಕ್ಷ ರೂ. ನೀಡಿ ವಾಹನ ತಂದಿದ್ದೇನೆ. ಅವರೂ ಯಾವುದೇ ರೀತಿಯ ರಿಯಾಯಿತಿ ನೀಡಿಲ್ಲ, ನಾನು ಕೂಡ ಬಯಸಿರಲಿಲ್ಲ. ಮನೆ ಬಳಿಯೇ ಕಂಪನಿಯ ಅಧಿಕಾರಿಗಳೇ ಬಂದಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಮಹೀಂದ್ರಾ ಕುಟುಂಬಕ್ಕೆ ನಿಮಗೆ ಸ್ವಾಗತ'.. ತುಮಕೂರಿನ ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸಿದ ಆನಂದ್​ ಮಹೀಂದ್ರಾ!

Last Updated : Jan 30, 2022, 5:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.