ತುಮಕೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯತ್ವ ಹರಾಜು ಪ್ರಕ್ರಿಯೆಗಳು ಭರ್ಜರಿಯಾಗಿ ನಡೆದಿವೆ. ತುರುವೇಕೆರೆ ತಾಲೂಕಿನ ಕಣತೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ ಸ್ಥಾನಗಳನ್ನು ಬರೋಬ್ಬರಿ 33.50 ಲಕ್ಷ ರೂ.ಗೆ ಹರಾಜು ಹಾಕಲಾಗಿದೆ.
ಕೆ.ಮಾವಿನಹಳ್ಳಿ, ಮುದ್ದನಹಳ್ಳಿ, ಕಣತೂರು ವಾರ್ಡ್ಗಳ ಸದಸ್ಯತ್ವ ಮಾರಾಟ ಮಾಡಲಾಗಿದೆ. ಈ ಕುರಿತ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ : ಜೈಲಿನಿಂದಲೇ ಗ್ರಾ.ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೋಪಣ್ಣ
ಮೂರು ವಾರ್ಡ್ಗಳ ಸದಸ್ಯತ್ವವನ್ನು 33.50 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಗ್ರಾಮದ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಹರಾಜು ಹಾಕಲಾಗಿದೆ. ಲಕ್ಷ್ಮಣಗೌಡ ಎಂಬಾತ ಹರಾಜು ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.