ತುಮಕೂರು: ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ವ್ಯಕ್ತಿಯೊಬ್ಬ ಹಣದಾಸೆಗೆ ಬಿದ್ದು ಕಳ್ಳತನದ ಹಾದಿ ಹಿಡಿದಿದ್ದ. ತನ್ನ ಸ್ನೇಹಿತನ ಜೊತೆ ಸೇರಿ ಇಬ್ಬರೂ ಗ್ರಾಮದಲ್ಲಿ ಕಳ್ಳತನ ಮಾಡಲು ಸ್ಕೇಚ್ ಸಹ ಹಾಕಿದ್ದರು. ತಡರಾತ್ರಿ ಮೋಟರ್ ಪಂಪ್ ಸೆಟ್ ಕದಿಯಲು ಹೋದ ಇಬ್ಬರು ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ದಿವ್ಯಾ ಸೇರಿ 6 ಜನರಿಗೆ ವೈದ್ಯಕೀಯ ತಪಾಸಣೆ : ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದೆ ಸಿಐಡಿ