ತುಮಕೂರು: ಡಿ.ಕೆ.ಶಿವಕುಮಾರ್ ವಿರುದ್ಧದ ಚಾರ್ಜ್ ಶೀಟ್ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ನ್ಯಾಯಾಂಗ ನಡವಳಿಕೆಗಳಿಗೆ ನಾವ್ಯಾರು ಜವಾಬ್ದಾರರಲ್ಲ. ನ್ಯಾಯಾಲವನ್ನು ಬಿಜೆಪಿ ಪಕ್ಷ ನಡೆಸುವುದಿಲ್ಲ. ಸಂವಿಧಾನ ಬದ್ಧವಾಗಿ ನ್ಯಾಯಾಲಯ ನಡೆಯುತ್ತದೆ. ದೇಶದಲ್ಲಿ 130 ಕೋಟಿ ಜನರಿದ್ದಾರೆ, ಅವರೆಲ್ಲರ ಮೇಲೂ ಸಿಬಿಐ ತನಿಖೆ ನಡೆಯುವುದಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೆ ನೋಟಿಸ್ ಕೊಡುತ್ತೆ. ಸಿಬಿಐ ಮೇಲೆ ಆರೋಪ ಮಾಡೋರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇಲ್ಲ ಎಂದರ್ಥ ಎಂದು ಹೇಳಿದರು.
ಪಠ್ಯ ಪುಸ್ತಕ ಕೇಸರಿಕರಣ ವಿಚಾರವಾಗಿ ಮಾತನಾಡಿದ ಅವರು, ಕೆಲವೊಂದು ಬದಲಾವಣೆ ತರಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಂದಾಗಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೊರೆಯಾಗದ ಹಾಗೆ ಶಿಕ್ಷಣ ಸಚಿವರು ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಯಾವ ರೀತಿ ಬದಲಾವಣೆ ತರಬೇಕೆಂದು ಸರ್ಕಾರ ತೀರ್ಮಾನ ಮಾಡುತ್ತೆ ಎಂದರು.
ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆ ಆಗಿದೆ : ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ