ತುಮಕೂರು: ಪೊಲೀಸರು ವಶಕ್ಕೆ ಪಡೆದ 41 ಬೈಕ್ಗಳಿಗೆ ಮಾಲೀಕರಿಲ್ಲ. ತುಮಕೂರು ಗ್ರಾಮೀಣ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 41 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೂ ವಾರಸುದಾರರು ಅವುಗಳನ್ನು ತೆಗೆದುಕೊಂಡು ಹೋಗಲು ಮುಂದಾಗಿಲ್ಲ.
ವಿವಿಧ ದಂಡ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದ ಬೈಕ್ಗಳಾಗಿವೆ. ಮಾರ್ಚ್ 12ರಂದು ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ಹರಾಜು ಮಾಡಲಾಗುತ್ತಿದೆ. ಗ್ರಾಮೀಣ ಠಾಣೆಯಲ್ಲಿ 23 ಹಾಗೂ ತಿಲಕ್ ಠಾಣೆಯಲ್ಲಿ18 ಬೈಕ್ಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.