ETV Bharat / state

ಕಲ್ಪತರು ನಾಡಿಗೂ ಬರ.. ಅಮಾನಿ ಕೆರೆಯಲ್ಲಿ ಚಿಲಿಪಿಲಿ ಗಾನ ಕೇಳ್ತಿಲ್ಲ.. ಎಲ್ಲಿ ಹೋದವೋ ವಿದೇಶಿ ಬಾನಾಡಿಗಳು..

ತುಮಕೂರು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣವೂ ಇಳಿಮುಖವಾಗಿದೆ. ಇದರಿಂದ ನಗರದ ಅಮಾನಿಕೆರೆಯಲ್ಲಿ ನೀರಿಲ್ಲ. ಇಲ್ಲಿಗೆ ಬರುತ್ತಿದ್ದ ವಿದೇಶಿ ಪಕ್ಷಿಗಳ ವಲಸೆ ಇಳಿಮುಖವಾಗುತ್ತಿದೆ.

ತುಮಕೂರಿನ ಅಮಾನಿಕೆರೆ
author img

By

Published : Jun 23, 2019, 1:33 PM IST

ತುಮಕೂರು : ರಾಜ್ಯದಲ್ಲಿ ಹಲವು ಜಿಲ್ಲೆಗಳು ಮಳೆಯಿಲ್ಲ. ಜಾನುವಾರು, ಪ್ರಾಣಿ-ಪಕ್ಷಿಗಳಿಗೂ ಕೂಡ ಈ ಬರದ ತಾಪ ತಟ್ಟಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಯೂ ಮಳೆಯಾಗದೆ ಪರಿತಪಿಸುತ್ತಿದೆ.

ಬತ್ತಿ ಹೋಯ್ತು ಅಮಾನಿ ಕೆರೆ..

ಅಮಾನಿಕೆರೆಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಇಳಿಮುಖ

ಒಂದು ಕಡೆ ಮಾನವರು ನೀರಿಲ್ಲದೆ ಪರಿತಪಿಸುತ್ತಿದ್ದರೆ, ಇನ್ನೊಂದೆಡೆ ಸಂತಾನೋತ್ಪತ್ತಿಗೆಂದು ಜಿಲ್ಲೆಗೆ ಬರುತ್ತಿದ್ದ ವಿದೇಶಿ ಪಕ್ಷಿಗಳ ಪ್ರಮಾಣ ಕಡಿಮೆಯಾಗಿದೆ. ನಿರೀಕ್ಷೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ತುಮಕೂರು ನಗರದಲ್ಲಿರುವ ಅಮಾನಿಕೆರೆಯಲ್ಲೂ ಕೂಡ ನೀರು ಬತ್ತಿದೆ. ಇದರಿಂದಾಗಿ ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳಿಗೂ ತೊಂದರೆಯಾಗಿದೆ.

ವಲಸೆ ಬಂದು ಕೆರೆಯ ದಂಡೆಗಳಲ್ಲಿ ಆಶ್ರಯಿಸುವ ಓಪನ್ ಸ್ಟಾರ್ಕ್, ಕೊಕ್ಕರೆ, ಕ್ಯಾಟಲ್ ಎಗ್ರೆಟ್, ಲಿಟಲ್ ಗ್ರೀನ್, ಬಿಟ್ಟರೇಟ್ ಸೇರಿದಂತೆ ಬಹುತೇಕ ವಿದೇಶಿ ಪಕ್ಷಿಗಳು ತಮ್ಮ ವಲಸೆಯನ್ನು ಕಡಿಮೆ ಮಾಡಿವೆ. ವಲಸೆಗೆಂದು ಬಂದಂತಹ ಬೆರಳೆಣಿಕೆಯಷ್ಟು ಪಕ್ಷಿಗಳಿಗೆ ಕೆರೆಗಳಲ್ಲಿ ನೀರಿಲ್ಲದಿರುವುದು ಕಷ್ಟ ತಂದಿದ್ದು, ಮರಳಿ ತಮ್ಮ ಮೂಲ ಸ್ಥಾನದತ್ತ ಹೊರಟಿವೆ.

ಬಿಟ್ಟರೇಟ್​ ಹಕ್ಕಿಗಳಿಗೆ ಮಾರ್ಚ್​​ನಿಂದ ಆಗಸ್ಟ್ ಅವರಿಗೆ ಸಂತಾನೋತ್ಪತ್ತಿಗೆ ಸೂಕ್ತ ಕಾಲ. ಈ ಪಕ್ಷಿಗಳು ಜೌಗುಪ್ರದೇಶದಲ್ಲಿ ತಮ್ಮ ಆಹಾರ ಅನ್ವೇಷಣೆಗೆ ತೊಡಗುತ್ತವೆ. ಈ ಪಕ್ಷಿಗಳಿಗೆ ಏಡಿ, ಮೀನು, ಸಿಗಡಿ ಸೇರಿದಂತೆ ಕೆಸರಿನ ಹುಳುಗಳು ಆಹಾರ. ಆದರೆ, ಕೆರೆಯಲ್ಲಿ ನೀರಿಲ್ಲದ ಕಾರಣ ಇವುಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಗೂಡು ಕಟ್ಟುವಿಕೆಗೂ ಅಡ್ಡಿಯಾಗಿದೆ.

ಅಮಾನಿಕೆರೆ ಸುತ್ತಲೂ ಇರುವ ಬೆಟ್ಟಗುಡ್ಡಗಳಲ್ಲಿ ಮಳೆ ಸುರಿದರೆ ನೇರವಾಗಿ ಕೆರೆಗೆ ಹರಿದು ಬರುತ್ತದೆ. ಆದರೆ, ಕೆರೆಯ ಸುತ್ತಲೂ ಹೆಚ್ಚು ಪ್ರಮಾಣದಲ್ಲಿ ಒತ್ತುವರಿ ಜಮೀನಿದೆ. ಅಲ್ಲದೆ ಕೆರೆ ನೀರು ಹರಿದು ಬರುವಂತಹ ಮಾರ್ಗದಲ್ಲಿ ಒತ್ತುವರಿದಾರೂ ಒಡ್ಡುಗಳನ್ನು ನಿರ್ಮಿಸಿದ್ದು ಕೆರೆಗೆ ನೀರು ಬಾರದಂತೆ ಮಾಡಿದ್ದಾರೆ.

Intro: ಕಲ್ಪತರು ನಾಡಿನಲ್ಲಿ ಬಣಗುಡುತ್ತಿರುವ ಕೆರೆಗಳು.... ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಅಪರೂಪದ ಪಕ್ಷಿಗಳು.....

ತುಮಕೂರು
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಬಣಗುಡುತ್ತಿವೆ, ಇನ್ನೊಂದೆಡೆ ಸಂತಾನೋತ್ಪತ್ತಿಗೆ ವಿದೇಶಿ ಪಕ್ಷಿಗಳು ಬರುವ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ನಿರೀಕ್ಷೆಯಂತೆ ಮಳೆಯಾಗದೆ ಹಿನ್ನೆಲೆಯಲ್ಲಿ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ತುಮಕೂರು ನಗರದ ಇದೆ ಮಗ ದಲ್ಲಿರುವ ಅಮಾನಿಕೆರೆಯಲ್ಲಿ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ಕೆರೆ ಆವರಣದಲ್ಲಿ ಸಂಗ್ರಹವಾಗಿರುವ ಸಣ್ಣ ಸಣ್ಣ ಗುಂಡಿಗಳಲ್ಲಿ ನೀರು ಉಳಿದುಕೊಂಡಿದೆ. ಜಲಚರಗಳು ಇಂತಹ ಗುಂಡಿಗಳಲ್ಲಿ ಮಳೆಗಾಗಿ ಜೀವ ಹಿಡಿದುಕೊಂಡು ಕುಳಿತಿವೆ.
ನೀರಿನ ಕೊರತೆಯಿಂದಾಗಿ ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಆಶ್ರಯ ಪಡೆದಿದ್ದ ನೀರು ಹಾವು ಏಡಿ ಮೀನು ಆಮೆ ಎಂತಹ ಜಲಚರಗಳ ಸಂಖ್ಯೆ ಕಡಿಮೆಯಾಗಿದೆ. ಇದೀಗ ಸಂತಾನೋತ್ಪತ್ತಿ ಮತ್ತು ಆಹಾರಕ್ಕಾಗಿ ಕೆರೆಯ ದಂಡೆಗಳಲ್ಲಿ ಆಶ್ರಯಿಸುವ ವಲಸೆ ಹಕ್ಕಿಗಳ ಆದ ಓಪನ್ ಸ್ಟಾರ್ಕ್ , ಕೊಕ್ಕರೆ ಬೆಳ್ಳಕ್ಕಿ , ಕ್ಯಾಟಲ್ ಎಗ್ರೆಟ್, ಲಿಟಲ್ ಗ್ರೀನ್ ಬಿಟರೇಟ್ ಸೇರಿದಂತೆ ಬಹುತೇಕ ವಿದೇಶಿ ಪಕ್ಷಿಗಳು ಆಹಾರಕ್ಕಾಗಿ ಪರದಾಡುತ್ತಿವೆ.
ವಿದೇಶದಿಂದ ಪಕ್ಷಿಗಳು ಸಂತಾನೋತ್ಪತ್ತಿಗೆ ಇಲ್ಲಿಗೆ ಬರುವುದು ಕೂಡ ಗಣನೀಯವಾಗಿ ಇಳಿಮುಖವಾಗಿದೆ. ಅಕಸ್ಮಾತ್ ಬೆರಳೆಣಿಕೆಯಷ್ಟು ಬಂದಂತಹ ಪಕ್ಷಿಗಳಿಗೆ ಕೆರೆಗಳಲ್ಲಿ ನೀರಿಲ್ಲ ದಿರುವುದು ದಿಕ್ಕೇ ತೋಚದಂತಾಗಿತ್ತು. ಕೆಲವೇ ದಿನಗಳು ಇದ್ದು ಇಲ್ಲಿಂದ ಜಾಗ ಖಾಲಿ ಮಾಡಿದೆ.

ಇನ್ನೂ ಮಾಸ್ ನಿಂದ ಆಗಸ್ಟ್ ಅವರಿಗೆ ಬಿಟ್ಟರೇನ್ ಪಕ್ಷಿಗೆ ಸಂತಾನೋತ್ಪತ್ತಿ ಸೂಕ್ತ ಕಾಲ. ಈ ಪಕ್ಷಗಳು ಜೌಗುಪ್ರದೇಶದ ಹುಲಿ ಮತ್ತು ಗಂಡಿನ ನಡುವೆ ಆಹಾರ ಅನ್ವೇಷಣೆಗೆ ತೊಡಗುತ್ತದೆ. ಏಡಿ ಮೀನು ಸಿಗಡಿ ಸೇರಿದಂತೆ ಕೆಸರಿನ ಹುಳುಗಳು ಇವುಗಳಿಗೆ ಆಹಾರ. ಆದರೆ ಕೆರೆಯಲ್ಲಿ ನೀರಿಲ್ಲದ ಕಾರಣ ಇವುಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಗೂಡು ಕಟ್ಟುವಿಕೆಗೂ ಅಡ್ಡಿಯಾಗಿದ್ದು ಪಕ್ಷಿಗಳು ಬಾರದ ಕಾರಣ ಕೆಲವು ಕಡೆ ಪ್ರವಾಸೋದ್ಯಮ ಕೂಡ ಕುಂಠಿತವಾಗುವ ಆತಂಕ ಎದುರಾಗಿದೆ.

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.