ತುಮಕೂರು: ನಗರದ ಹೊರವಲಯದಲ್ಲಿರುವ ಊರುಕೆರೆ ಪೋಸ್ಟ್ ಬಳಿ ಬೆಳಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆ ತುಂಬಾ ಚೆಲ್ಲಾಡಿದ್ದವು. ಈ ವೇಳೆ ಸೋಪುಗಳನ್ನು ಕದ್ದೊಯ್ಯಲು ಸಾರ್ವಜನಿಕರು ನಾ ಮುಂದು ತಾ ಮುಂದು ಎನ್ನುತ್ತ ಮುಗಿಬಿದ್ದಿದ್ದರು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಲಾರಿಗೆ ಬಸ್ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ,16 ಮಂದಿಗೆ ಗಂಭೀರ ಗಾಯ..
ಖಾಸಗಿ ಬಸ್ವೊಂದು ಮುಂದೆ ಸಾಗುತ್ತಿದ್ದ ಲಕ್ಸ್ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು.
ರಾಮಪ್ಪ ಎರೆಬಳ್ಳಿ(45), ಫಜಲ್ ವುಲ್ಲಾ (35) ಸೇರಿ ಮೂವರು ಮೃತಪಟ್ಟಿದ್ದರೆ, ಗೊಟ್ಟೆನಾಯ್ಡು(57) , ಕೀರ್ತಿ , ಅಶ್ವಿನ್ ಕುಮಾರ್, ರಾಜೇಶ ಎಂಬುವರಿಗೆ ಗಾಯಗಳಾಗಿವೆ.