ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮಿಡತೆಗಳ ಹಾವಳಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಿಡತೆಗಳು ಸಧ್ಯ ಎಕ್ಕೆ ಗಿಡಗಳ ಮೇಲೆ ದಾಳಿ ಮಾಡಿದ್ದು, ಜನರು ಭಯ ಭೀತರಾಗಿದ್ದಾರೆ.
![locust attacks](https://etvbharatimages.akamaized.net/etvbharat/prod-images/img-20200601-wa0005_0106newsroom_1590982572_560.jpg)
ಶಿರಾ ತಾಲೂಕಿನ ಗಂಗನಹಳ್ಳಿಯಲ್ಲಿ ಹಸಿರು ಮಿಡತೆಗಳು ಕಾಣಿಸಿಕೊಂಡಿದ್ದು, ಇವು ಗಿಡಗಳ ಎಲೆಗಳನ್ನು ತಿನ್ನುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳೆಗಳ ಮೇಲೆ ದಾಳಿ ಮಾಡಬಹುದು ಎಂದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗುಂಪು ಗುಂಪಾಗಿ ಗಿಡಗಳ ಮೇಲೆ ಕಾಣಿಸಿಕೊಂಡಿರುವ ಈ ಮಿಡತೆಗಳು ಬೆಂಕಿ ತಾಗಿಸಿದರು ಹಾರಿ ಹೋಗುತ್ತಿಲ್ಲ.
ಸಧ್ಯ ಮುಂಗಾರು ಶುರುವಾಗಿದ್ದು ಬಿತ್ತನೆ ಕಾರ್ಯ ಶುರುವಾಗಿದೆ. ಶಿರಾ ತಾಲೂಕಿನಲ್ಲಿ ಶೇಂಗಾ, ರಾಗಿ, ಅಲಸಂದೆ, ತೊಗರಿ, ಜೋಳದ ಬೆಳೆಗಳನ್ನು ಅಧಿಕವಾಗಿ ಬೆಳೆಯುವುದರಿಂದ ಈ ಮಿಡತೆಗಳು ನಮ್ಮ ಬೆಳೆಗಳನ್ನು ಹಾನಿ ಮಾಡಬಹುದೆಂಬ ಭಯದಲ್ಲೇ ಜಮೀನಿನ ಕೆಲಸ ಕಾರ್ಯ ಮಾಡುತ್ತಿದ್ದಾರೆ.