ತುಮಕೂರು: ಬಿಜೆಪಿಯಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಇರ್ತಾರೆ. ಹೈಕಮಾಂಡ್ ನಿರ್ಣಯ ಬಿ.ವೈ. ವಿಜಯೇಂದ್ರ ಅವರಿಗೆ ಒಪ್ಪಿಗೆ ಇದೆ. ಈ ಬಗ್ಗೆ ವಿಜಯೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಪಕ್ಷದ ಆದೇಶ, ಪಕ್ಷದ ನಿರ್ಣಯ ನಾವೆಲ್ಲರೂ ತಲೆಬಾಗಲೇಬೇಕು. ನಮ್ಮ ಪಕ್ಷದ ಯುವನಾಯಕರು, ರಾಜ್ಯದ ಉಪಾಧ್ಯಕ್ಷರು, ಸದ್ಯ ವಿಧಾನಪರಿಷತ್ ಸ್ಥಾನಕ್ಕಿಂತ ಮೇಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರಿನಲ್ಲಿ ಹೇಳಿದ್ದಾರೆ.
ವಿಜಯೇಂದ್ರ ಅವರ ನಿರ್ಣಯ ಏನು ಅನ್ನೋದನ್ನ ಅವರೇ ಹೇಳಿದ್ದಾರೆ. ಅಂತಹದ್ದೇನೂ ಇಲ್ಲ, ಯಡಿಯೂರಪ್ಪ ನಮ್ಮ ಮಹಾನ್ ನಾಯಕರು, ಪಕ್ಷ ಬೆಳೆಸಿದವರು. ನಾವು ಅವರನ್ನ ಅಗೌರವಿಸುವಂತಹ ಪ್ರಶ್ನೆಯೇ ಇಲ್ಲ. ಟಿಕೆಟ್ ನಿರ್ಣಯ ಮಾಡಿದ್ದು, ಬೇರೆ ಬೇರೆ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದರು.
ಮಂಗಳೂರು ತಾಂಬೂಲ ಪ್ರಶ್ನೆ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ಆ ಭಾಗದ ಜನರ ನಂಬಿಕೆ ಅದು. ಹಾಗಾಗಿ ನಾನೇನು ಅದನ್ನ ಅಲ್ಲ ಗೆಳೆಯೋಕೆ ಆಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಮಂಗಳೂರು ಪೊಲೀಸರು ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಮಸೀದಿಯ ರಿನೋವೇಷನ್ಗೆ ಹೋದಾಗ ದೇವಾಲಯದ ಅವಶೇಷಗಳು ಸಿಕ್ಕಿವೆ. ಆ ಕಾಮಗಾರಿಯನ್ನ ಮುಂದುವರಿಸಬಾರದು ಎಂದು ಕೋರ್ಟ್ ಸ್ಟೇ ಕೊಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: ವಾಯವ್ಯ ಪದವೀಧರ-ಶಿಕ್ಷಕ ಕ್ಷೇತ್ರಕ್ಕೆ ಚುನಾವಣೆ : ಡಿಕೆಶಿ ಸಮ್ಮುಖದಲ್ಲಿ ಕೈ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಪೊಲೀಸರ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಸಿಐಡಿಯಿಂದ ವಿಶೇಷ ರೀತಿಯಲ್ಲಿ ಕಾರ್ಯಾಚರಣೆ ಮಾಡಲಾಗ್ತಿದೆ. ಸಂಪೂರ್ಣ ಅಮೂಲಗ್ರವಾಗಿ ಬೇರು ಮಟ್ಟಕ್ಕೆ ಹೋಗಿ ತನಿಖೆ ಮಾಡಲಾಗುತ್ತಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೋ, ಅವರನ್ನ ಅರೆಸ್ಟ್ ಮಾಡುವಂತಹ ಕೆಲಸವನ್ನ ಸಿಐಡಿ ಮಾಡ್ತಿದೆ. ಕಾನೂನು ಕ್ರಮ ಕೈಗೊಳ್ಳುವಂತಹ ಎಲ್ಲ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.