ETV Bharat / state

ಕಾಡುಮೊಲ ಕೊಂದು ಟಿಕ್​ಟಾಕ್:  ವಿಡಿಯೋ ಮಾಡಿದ್ದ ಇಬ್ಬರ ಬಂಧನ - ಕಾಡುಮೊಲ ಕೊಂದ ಟಿಕ್​ಟಾಕ್ ವಿಡಿಯೋ

ವನ್ಯಜೀವಿಯಾಗಿರುವ ಕಾಡುಮೊಲವನ್ನು ಬೇಟೆಯಾಡಿ ಟಿಕ್​ಟಾಕ್​ ಮಾಡಿರುವ ಇಬ್ಬರನ್ನು ಬಂಧಿಸಲಾಗಿದೆ.

ಇಬ್ಬರ ಬಂಧನ
ಇಬ್ಬರ ಬಂಧನ
author img

By

Published : May 1, 2020, 8:58 PM IST

ತುಮಕೂರು : ಕಾಡುಮೊಲ ಬೇಟೆಯಾಡಿ ಮಾಂಸವನ್ನಾಗಿ ಮಾಡಿರುವ ವಿಡಿಯೋವನ್ನು ಟಿಕ್​ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರಿದುಗ್ಗನಹಳ್ಳಿಯ ವಿನಯ್, ಎಸ್.ಗೊಲ್ಲಹಳ್ಳಿಯ ಜಿ.ಪಿ.ವಿನಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ವನ್ಯಜೀವಿಯಾಗಿರುವ ಕಾಡು ಮೊಲವನ್ನು ಬೇಟೆಯಾಡಿ ಚರ್ಮವನ್ನು ಸುಲಿದು ಮಾಂಸವನ್ನಾಗಿ ಮಾಡಿದ್ದರು. ಇದರ ಟಿಕ್​ಟಾಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಉಪ -ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.