ETV Bharat / state

ದೇವಾಲಯಗಳ ಹುಂಡಿಗೆ ಕನ್ನ ಹಾಕೋ ಖದೀಮರು ಅರೆಸ್ಟ್: ಚಿನ್ನಾಭರಣ, ದೇವರ ಮೂರ್ತಿ ವಶ - ದೇವಸ್ಥಾನ ಹುಂಡಿ ಕಳ್ಳರ ಬಂಧನ

ತುಮಕೂರಲ್ಲಿ ದೇವಸ್ಥಾನಗಳನ್ನು ಟಾರ್ಗೇಟ್​ ಮಾಡಿಕೊಂಡು ಚಿನ್ನಾಭರಣ ಹಾಗೂ ಹುಂಡಿ ದೋಚುತ್ತಿದ್ದ ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನಾಭರಣ, ಹಣ ವಶಕ್ಕೆ ಪಡೆದಿದ್ದಾರೆ.

temple money, jewelry robbers arrested
ಆರೋಪಿಗಳಾದ ನಾಗರಾಜ,ರಮೇಶ
author img

By

Published : Jan 15, 2020, 6:22 AM IST

ತುಮಕೂರು: ದೇವಸ್ಥಾನಗಳ ಹುಂಡಿ ಹಣ ಹಾಗೂ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಕಳ್ಳರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ಕೊರಟಗೆರೆ ತಾಲೂಕಿನ ಬೈರಗೊಂಡಲು ಗ್ರಾಮದ ನಾಗರಾಜ ಮತ್ತು ರಮೇಶ ಬಂಧಿತ ಆರೋಪಿಗಳು.

temple money, jewelry robbers arrested
ಆರೋಪಿಗಳಾದ ನಾಗರಾಜ,ರಮೇಶ

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಂಕಳ ಕೊಪ್ಪ ಗ್ರಾಮದ ಮಾರಮ್ಮನ ದೇವಸ್ಥಾನದ ಹುಂಡಿ, ವೀರಣ್ಣ ಗುಡಿ ದೇವಸ್ಥಾನದ ಭದ್ರ ಕಾಳಮ್ಮ ಮತ್ತು ಲಕ್ಷ್ಮೀ ದೇವಸ್ಥಾನದಲ್ಲಿ ಆಭರಣ ಹಾಗೂ ಹುಂಡಿ, ಬೋರಪ್ಪನಹಳ್ಳಿ ಕೆಂಪಮ್ಮ ದೇವಿ ದೇವಸ್ಥಾನದಲ್ಲಿನ ದೇವರ ಆಭರಣ ಹಾಗೂ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಆರೋಪಗಳಿವೆ.

ಬಂಧಿತ ಆರೋಪಿಗಳಿಂದ ದೇವರ ತಾಳಿ, ಬೆಳ್ಳಿಯ ಕವಚಗಳು, ಕಾಲಿನ ಕವಚಗಳು, ಚಿನ್ನದ ಗುಂಡುಗಳು, ಲಕ್ಷ್ಮೀದೇವಿಯ ಮುಖವಾಡ, ಪ್ರಭಾವಳಿ ಸೇರಿದಂತೆ ವಿವಿಧ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುಬ್ಬಿ, ತುರುವೇಕೆರೆ, ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಂತಹ ಪ್ರಮುಖವಾಗಿ ದೇವಸ್ಥಾನದಲ್ಲಿನ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Intro:ದೇಗುಲಗಳ ಹುಂಡಿ ಚೋರರ ಬಂಧನ......!

ತುಮಕೂರು
ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿಕೊಂಡು ಹುಂಡಿ ಹೊಡೆಯುವುದು ಹಾಗೂ ಚಿನ್ನಾಭರಣ ದೋಚುವ ಇಬ್ಬರು ಚಾಲಾಕಿ ಚೋರರನ್ನು ತುಮಕೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರಟಗೆರೆ ತಾಲೂಕಿನ ಬೈರಗೊಂಡಲು ಗ್ರಾಮದ ನಾಗರಾಜ ಮತ್ತು ರಮೇಶ ಬಂಧಿತ ಆರೋಪಿಗಳಾಗಿದ್ದಾರೆ. ಗುಬ್ಬಿ ತಾಲೂಕಿನ ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಂಕಳ ಕೊಪ್ಪ ಗ್ರಾಮದ ಮಾರಮ್ಮನ ದೇವಸ್ಥಾನದ ಹುಂಡಿ, ವೀರಣ್ಣ ಗುಡಿ ದೇವಸ್ಥಾನದ ಭದ್ರಕಾಳಮ್ಮ ಮತ್ತು ಲಕ್ಷ್ಮಿ ದೇವಸ್ಥಾನದಲ್ಲಿ ಆಭರಣ ಹಾಗೂ ಹುಂಡಿ, ಬೋರಪ್ಪನಹಳ್ಳಿ ಕೆಂಪಮ್ಮ ದೇವಿ ದೇವಸ್ಥಾನದಲ್ಲಿನ ದೇವರ ಆಭರಣ ಹಾಗೂ ಗುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ದೇವರ ತಾಳಿ, ಬೆಳ್ಳಿಯ ಕವಚಗಳು, ಕಾಲಿನ ಕವಚಗಳು, ಚಿನ್ನದ ಗುಂಡುಗಳು, ಲಕ್ಷ್ಮೀದೇವಿಯ ಮುಖವಾಡ, ಪ್ರಭಾವಳಿ ಸೇರಿದಂತೆ ವಿವಿಧ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಅಷ್ಟೇ ಅಲ್ಲದೆ ಗುಬ್ಬಿ, ತುರುವೇಕೆರೆ, ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಂತಹ ಪ್ರಮುಖವಾಗಿ ದೇವಸ್ಥಾನದಲ್ಲಿನ ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Body:ತುಮಕೂರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.