ETV Bharat / state

ಮಹಿಳಾ ಸಿಬ್ಬಂದಿಗೆ ತಹಶೀಲ್ದಾರ್​​ನಿಂದ ನಿಂದನೆ ಆರೋಪ: ಗ್ರಾಮಲೆಕ್ಕಿಗರಿಂದ ಧರಣಿ

ತಹಶೀಲ್ದಾರ್‌ ನಂದೀಶ್‌ ಹಾಗೂ ಪತ್ನಿ ತನ್ನನ್ನು ನಿಂದಿಸಿದ್ದಾರೆಂದು ಆರೋಪಿಸಿರುವ ಮಿಡಿಗೇಶಿ ಗ್ರಾಮ ಲೆಕ್ಕಿಗರಾದ ಮಂಜುಳಾ ಎಂಬುವರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮಹಿಳಾ ಸಿಬ್ಬಂದಿ ಮೇಲೆ ತಹಶೀಲ್ದಾರ್ ಮತ್ತು ಆತನ ಪತ್ನಿಯಿಂದ ನಿಂದನೆ, ಹಲ್ಲೆ ಆರೋಪ
author img

By

Published : Aug 25, 2019, 7:00 PM IST

ತುಮಕೂರು: ಕಾರ್ಯದ ಒತ್ತಡದಲ್ಲಿದ್ದ ತಹಶೀಲ್ದಾರ್‌ ಮಹಿಳಾ ಸಿಬ್ಬಂದಿಗೆ ನಿಂದಿಸಿದ್ದಾರೆಂದು ಆರೋಪಿಸಿ ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ಮಧುಗಿರಿ ತಹಶೀಲ್ದಾರ್‌ ಕಚೇರಿ ಮುಂಭಾಗ ಧರಣಿ ನಡೆಸಿದರು.

ಮಹಿಳಾ ಸಿಬ್ಬಂದಿ ಮೇಲೆ ತಹಶೀಲ್ದಾರ್ ಮತ್ತು ಆತನ ಪತ್ನಿಯಿಂದ ನಿಂದನೆ, ಹಲ್ಲೆ ಆರೋಪ

ಮಧುಗಿರಿ ತಾಲೂಕಿನ ಬೇಡತ್ತೂರು ಮತ್ತು ರೆಡ್ಡಿಹಳ್ಳಿ ಗ್ರಾಮದ ಜನಸಂಪರ್ಕ ಸಭೆಯ ಪೂರ್ವಭಾವಿ ಸಿದ್ಧತೆಯ ಬಗ್ಗೆ ಪರಿಶೀಲನೆಗಾಗಿ ಭೇಟಿ ನೀಡಿದ ವೇಳೆ ತಹಶೀಲ್ದಾರ್ ನಂದೀಶ್ ಸೇರಿದಂತೆ ಸಿಬ್ಬಂದಿ ಜೊತೆ ಗ್ರೂಪ್ ಫೋಟೋ ತೆಗೆದು ಅದನ್ನು ರೆಡ್ಡಿಹಳ್ಳಿ ಮಹಿಳಾ ಗ್ರಾಮಲೆಕ್ಕಿಗರಾದ ಮಂಜುಳ ಎಂಬುವರು ತಾಲೂಕು ಕಚೇರಿ ಅಧಿಕಾರಿಗಳ ವಾಟ್ಸಪ್ ಗ್ರೂಪ್​ಗೆಗೆ ಶೇರ್ ಮಾಡಿದ್ದರಂತೆ. ನಂತರ ತಹಶೀಲ್ದಾರ್ ನಂದೀಶ್ ವಸತಿ ಗೃಹಕ್ಕೆ ಬರುವಂತೆ ದೂರವಾಣಿ ಮೂಲಕ ಮಹಿಳೆಗೆ ತಿಳಿಸಿದ್ದರಂತೆ.

tumkuru
ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ

ಮನೆಗೆ ಹೋದ ಸಂದರ್ಭದಲ್ಲಿ ತಹಶೀಲ್ದಾರ್ ಮತ್ತು ಅವರ ಪತ್ನಿ ತ್ರಿವೇಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನನ್ನ ಕುಟುಂಬದವರೊಂದಿಗೆ ಸಹ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಇದ್ರಿಂದ ತೀವ್ರ ಮಾನಸಿಕವಾಗಿ ನೊಂದು ಹೋಗಿದ್ದೇನೆ ಎಂದು ಮಂಜುಳಾ, ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅವರ ಕರೆ ಸಂಪೂರ್ಣ ರೆಕಾರ್ಡ್​ ಮಾಡಿದ್ದು, ತಮ್ಮ ಮುಂದೆ ಹಾಜರುಪಡಿಸಲು ಸಿದ್ಧಳಿದ್ದೇನೆ. ನನ್ನ ಮೇಲೆ ನಡೆಸಿರುವಂತಹ ದೌರ್ಜನ್ಯವನ್ನು ಪರಿಶೀಲಿಸಿ, ತಹಶೀಲ್ದಾರ್ ಮತ್ತು ಅವರ ಪತ್ನಿ ತ್ರಿವೇಣಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಿದ್ದಾರೆ.

ಇನ್ನು ತಹಶೀಲ್ದಾರ್ ವರ್ತನೆಯನ್ನು ಕಚೇರಿ ಸಿಬ್ಬಂದಿ ಸಹ ತೀವ್ರವಾಗಿ ಖಂಡಿಸಿದ್ದು, ಆಕೆಯ ಬೆಂಬಲಕ್ಕೆ ನಿಂತು ಧರಣಿ ನಡೆಸಿದ್ದಾರೆ.

Intro:Body:
ಮಹಿಳಾ ಗ್ರಾಮ ಲೆಕ್ಕಿಗರೊಬ್ಬರ ಮೇಲೆ ತಹಸೀಲ್ದಾರ್ ಮತ್ತು ಅವರ ಪತ್ನಿಯಿಂದ ನಿಂದನೆ, ಹಲ್ಲೆ ಆರೋಪ….

ತುಮಕೂರು

ತಹಸೀಲ್ದಾರ್ ಜೊತೆ ಕತಱವ್ಯದ ವೇಳೆ ಗ್ರೂಪ್ ಪೋಟೋ ತೆಗೆದು ವಾಟ್ಸ್ ಅಪ್ ಗ್ರೂಪ್ ಗೆ ಹಾಕಿದ್ದಕ್ಕೆ ಕೆಂಡಾಮಂಡಲರಾಗಿದ್ದ ತಹಸೀಲ್ದಾರ್ ಮತ್ತು ಅವರ ಪತ್ನಿ ಇಬ್ಬರೂ ಮಹಿಳಾ ಗ್ರಾಮಲೆಕ್ಕಿಗರೊಬ್ಬರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಬೇಡತ್ತೂರು ಮತ್ತು ರೆಡ್ಡಿಹಳ್ಳಿ ಗ್ರಾಮದ ಜನಸಂಪಕಱ ಸಭೆ ಪೂವಱ ಭಾವಿ ಸಿದ್ದತೆಗಳ ಬಗ್ಗೆ ಪರಿಶೀಲನೆಗಾಗಿ ಭೇಟಿ ನೀಡಿದ ವೇಳೆಯಲ್ಲಿ ತಹಸೀಲ್ದಾರ್ ನಂದೀಶ್ ಸೇರಿದಂತೆ ಸಿಬ್ಬಂದಿಗಳ ಜೊತೆ ಗ್ರೂಪ್ ಪೋಟೋ ತೆಗೆದು ಅದನ್ನು ರೆಡ್ಡಿಹಳ್ಳಿ ಮಹಿಳಾ ಗ್ರಾಮ ಲೆಕ್ಕಿಗರಾದ ಮಂಜುಳ ಎಂಬುವರು ತಾಲೂಕು ಕಚೇರಿ ಅಧಿಕಾರಿಗಳ ವಾಟ್ಸ್ ಅಪ್ ಗ್ರೂಪ್ ಗೆ ಶೇರ್ ಮಾಡಿದ್ದರು.

ನಂತರ ತಹಸೀಲ್ದಾರ್ ನಂದೀಶ್ ವಸತಿ ಗೃಹಕ್ಕೆ ಬರುವಂತೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಮನೆಗೆ ಹೋದ ಸಂದಭಱದಲ್ಲಿ ತಹಸೀಲ್ದಾರ್ ಮತ್ತು ಅವರ ಪತ್ನಿ ತ್ರಿವೇಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದೈಹಿಕ ಹಲ್ಲೆಯನ್ನು ನಡೆಸಿದ್ದಾರೆ. ಅಲ್ಲದೆ ನನ್ನ ಕುಟುಂಬದವರೊಂದಿಗೆ ಸಹ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಇದ್ರಿಂದ ತೀವ್ರ ಮಾನಸಿಕವಾಗಿ ನೊಂದು ಹೋಗಿದ್ದೇನೆ ಎಂದು ಮಂಜುಳಾ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಹಸೀಲ್ದಾರ್ ಪತ್ನಿ ತ್ರಿವೇಣಿ ಅವರಿಂದ ನಡೆದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ವಿವರಿಸಲು ಕಷ್ಟವಾಗುತ್ತಿದೆ. ಅದ್ರ ಸಂಪೂಣಱ ರೆಕಾಡ್ ಱ ಮಾಡಿದ್ದು, ತಮ್ಮ ಮುಂದೆ ಹಾಜರುಪಡಿಸಲು ಸಿದ್ದಳಿದ್ದೇನೆ. ನನ್ನ ಮೇಲೆ ನಡೆಸಿರುವಂತಹ ದೌಜಱನ್ಯವನ್ನು ಪರಿಶೀಲಿಸಿ, ತಹಸೀಲ್ದಾರ್ ನಂದೀಶ್ ಮತ್ತು ಅವರ ಪತ್ನಿ ತ್ರಿವೇಣಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಿದ್ದಾರೆ.

ತಹಸೀಲ್ದಾರ್ ನಂದೀಶ್ ಮತ್ತು ಅವರ ಪತ್ನಿ ತ್ರಿವೇಣಿ ನನ್ನ ಮಾಡುತ್ತಿರುವ ಆಪಾದನೆ ಯಾವತ್ತೂ ಬಂದಿರಲಿಲ್ಲ. ಮೂಲತಃ ದಾವಣಗೆರೆ ಜಿಲ್ಲೆಯವರು 5 ವಷಱಗಳಿಂದ ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ವೃತ್ತದಲ್ಲಿ ಗ್ರಾಮ ಲೆಕ್ಕಿಗರಾಗಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೆಲಸಕ್ಕೆ ಯಾವ್ದೆ ರೀತಿಯ ಹಿನ್ನೆಡೆ ಆಗಬಾರದು ಎಂಬ ಉದ್ದೇಶದಿಂದ ಮನೆಗೆ ಕಂಪ್ಯೂಟರ್ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದೆ. ಅಲ್ಲದೆ ಮನೆ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು ಎಂದ್ರು, ಅದಕ್ಕೆ ಸಿದ್ದಳಿದ್ದೇನೆ ಎಂದು ತಹಸೀಲ್ದಾರ್ ಗೆ ತಿಳಿಸಿದ್ದೆ. ಸ್ಮಶಾನದ ಬಗ್ಗೆ ಮಾಹಿತಿ ಪಡೆಯಲು ಸ್ಥಳಕ್ಕೆ ತೆರೆಳಿದ್ದೆವು. ಆಗ ಅಲ್ಲಿ ಪೋಟೋ ತೆಗೆದು ವಾಟ್ಸ್ ಅಪ್ ಗ್ರೂಪ್ ಗೆ ಹಾಕಿದರೋ ಗೊತ್ತಿಲ್ಲ. ಜನಸಂಪಕಱ ಸಭೆ ಕೂಡ ಮುಗಿದುಹೋಗಿತ್ತು. ಆನಂತರ 15 ದಿನಗಳಿಂದ ನಿತ್ಯ ತಹಸೀಲ್ದಾರ್ ನಂದೀಶ್ ಮೊಬೈಲ್ಗೆ ಕರೆ ಮಾಡಿ ವಾಚಾಮಗೋಚರವಾಗಿ ನಿಂದಿಸುತ್ತಿದ್ದರು. ಈ ನಡುವೆ ಮನೆ ಮನೆಗೆ ಭೇಟಿ ನೀಡುತ್ತಿದ್ದಾಗ ಗ್ರಾಮ ಪಂ. ಕಾಯಱದಶಿಱ ಸ್ಥಳಕ್ಕೆ ಬಂದಿಲ್ಲ, ಬರುವಂತೆ ತಹಸೀಲ್ದಾರ್ ಸೂಚಿಸಿದ್ದರು. ಅದ್ರಂತೆ ನಾನು ಸ್ಥಳಕ್ಕೆ ಹೋದೆನು. ಆಗ ಸರಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಮನೆ ಮನೆಗೆ ಭೇಟಿ ಬಗ್ಗೆ ಪೋಟೋ ತೆಗೆದು ವಾಟ್ಸ್ ಅಪ್ ಗ್ರೂಪ್ ಗೆ ಹಾಕಿದೆ. ಆನಂತರ ಪುನಃ ತಹಸೀಲ್ದಾರ್ ಅವಾಚ್ಯ ಶಬ್ದಗಳಿಂದ ಬೆಳ್ಳಂ ಬೆಳಗ್ಗೆ ನಿಂದಿಸುತ್ತಲೆ ಇದ್ದರು. ನನ್ನ ಪೋಷಕರಿಗೂ ವಿಷಯ ತಿಳಿಸಿದ್ದೆ. ಮಾರನೆ ದಿನ ಮನೆಗೆ ಕರೆಸಿಕೊಂಡು ಸುಮಾರು 1 ಗಂಟೆ ಕಾಲ ತಹಸೀಲ್ದಾರ್ ಮತ್ತ ುಅವರ ಪತ್ನಿ ತ್ರಿವೇಣೀ ಮಾನಸಿಕ ನಿಂದಿಸಿದ್ದರಿಂದ ಮಾನಸಿಕ ವೇದನೆಗೆ ಒಳಗಾಗಿದ್ದೇನೆ ಎನ್ನುತ್ತಾರೆ ಮಂಜುಳ.

ಬೈಟ್ : ಮಂಜುಳ, ನೊಂದ ಗ್ರಾಮ ಲೆಕ್ಕಿಗರು…

ತಹಸೀಲ್ದಾರ್ ವತಱನೆಯನ್ನು ತಹಸೀಲ್ದಾರ್ ಕಚೇರಿ ಸಿಬ್ಬಂದಿಗಳು ಸಹ ತೀವ್ರವಾಗಿ ಖಂಡಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.