ತುಮಕೂರು: ಶುಕ್ರವಾರ ಬೆಳಂ ಬೆಳಗ್ಗೆ ತುಮಕೂರು ನಗರದಲ್ಲಿನ ರೌಡಿಶೀಟರ್ಗಳ ಮನೆಗೆ ಪೊಲೀಸರು ದಿಢೀರ್ ಎಂಟ್ರಿಕೊಟ್ಟಿದ್ದಾರೆ. ಅವರ ಬಳಿ ಇದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಮುಂಬರುವ ಬಕ್ರೀದ್ ಹಬ್ಬ ಹಾಗೂ ಅಕ್ರಮ ಚಟುವಟಿಕೆ ಹೆಚ್ಚಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಂತರ ನಗರದ ಚಿಲುಮೆ ಸಮುದಾಯ ಭವನದಲ್ಲಿ ಪರೇಡ್ ನಡೆಸಿ, 84 ರೌಡಿಶೀಟರ್ಗಳಿಗೆ ಎಚ್ಚರಿಕೆ ನೀಡಲಾಯಿತು.
ಸ್ಥಳಕ್ಕೆ ಬಂದ ಎಸ್ಪಿ: ಪೊಲೀಸ್ನವರಿಗೆ ಫೋನ್ ಮಾಡಿ ಆವಾಜ್ ಹಾಕೋದನ್ನ ಇಡ್ಕೋಬೇಡ. ಈಗಾಗಲೇ ಎರಡು ಕಾಲು ಕಳ್ಕೊಂಡಿದ್ದೀಯಾ. ನಿನ್ನ ಫೋನ್ ರೆಕಾರ್ಡ್ಗಳು ನನ್ನ ಬಳಿ ಇದೆ ಎಂದು ರೌಡಿಶೀಟರ್ ರೋಹಿತ್ ಎಂಬಾತನಿಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಮತ್ತೊಬ್ಬ ರೌಡಿಶೀಟರ್ ಚಿದಾನಂದ ಎಂಬಾತನನ್ನು ಎಸ್ಪಿ ತರಾಟೆಗೆ ತೆಗೆದುಕೊಂಡರು. ಲೀಡರ್ ಆಗಲು ಹೊರಟಿದ್ದೀಯಾ ಅದನ್ನು ಬಿಟ್ಟುಬಿಡು. ರೌಡಿಗಳಿಗೆ ಲೀಡರ್ ಆಗೋದನ್ನು ಇಟ್ಟುಕೊಳ್ಳಬೇಡ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಎರಡು ಸರ್ಕಾರಿ ಬಸ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ: 10ಕ್ಕೂ ಹೆಚ್ಚು ಜನರಿಗೆ ಗಾಯ