ತುಮಕೂರು: ಅವಸಾನದ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯೊಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಮೆಯನ್ನು ವಶಕ್ಕೆ ಪಡೆದು ನಂತರ ಶೆಟ್ಟಿಕೆರೆ ಸಮೀಪದ ಹಳ್ಳಕ್ಕೆ ಬಿಟ್ಟರು.
ಜಾಗತಿಕವಾಗಿ ಈ ನಕ್ಷತ್ರ ಆಮೆಗೆ ಸಾಕಷ್ಟು ಬೇಡಿಕೆ ಇದೆ. ಬಯಲುಸೀಮೆಯಲ್ಲಿ ಈ ಆಮೆಗಳು ಕಂಡು ಬರುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಇದು ಅಳಿವಿನಂಚಿನಲ್ಲಿದೆ.