ತುಮಕೂರು: ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಈ ನಡುವೆ ಸಚಿವರೊಬ್ಬರ ಕಾರನ್ನು ಮಠದ ಒಳಗೆ ಹೋಗಲು ಬಿಟ್ಟ ಪೊಲೀಸ್ ಅಧಿಕಾರಿಯನ್ನು ಎಸ್ಪಿ ಅನೂಪ್ ಶೆಟ್ಟಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಮಠದ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದ್ದು, ಅನುಮತಿಯಿಲ್ಲದೇ ವಾಹನಗಳಿಗೆ ಮಠದ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿಯೂ ಪೊಲೀಸ್ ಅಧಿಕಾರಿಯೊಬ್ಬರು ಸಚಿವರೊಬ್ಬರ ಕಾರನ್ನು ಮಠದ ಒಳಗೆ ಬಿಟ್ಟಿದ್ದಾರೆ.
ಇದನ್ನು ಗಮನಿಸಿದ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದ ಎಸ್ಪಿ ಅನೂಪ್ ಶೆಟ್ಟಿ ತನ್ನ ಕಿರಿಯ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.