ತುಮಕೂರು: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಮನೆ ದರೋಡೆ ಮಾಡಿದ್ದ 6 ಮಂದಿ ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಅರಕೆರೆ ಕ್ರಾಸ್ನಲ್ಲಿ ಮೇ 26ರಂದು ಹಗಲು ಹೊತ್ತಿನಲ್ಲಿ ಲೀಲಾವತಿ ಅವರ ಮನೆ ಬಾಡಿಗೆಯ ಮುಂಗಡ ಹಣ ಕೊಡುವ ನೆಪದಲ್ಲಿ ಒಳನುಗ್ಗಿದ 6 ಮಂದಿ, ಏಕಾಏಕಿ ಅವರನ್ನು ಹಿಡಿದು ಥಳಿಸಿ ಬಳಿಕ ಕೈ-ಕಾಲು ಕಟ್ಟಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಬೀರುವನ್ನು ಒಡೆದು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು.
ತುಮಕೂರು ಗ್ರಾಮಾಂತರ ಪೊಲೀಸರು 6 ಮಂದಿ ದರೋಡೆಕೋರರನ್ನು ಬಂಧಿಸಿ 9 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಪಿ.ವೆಂಕಟೇಶ್, ಸಂದೀಪುಡಿ ಮುರಳಿ ಮಣಿ ಸ್ವರೂಪ್, ಪಲ್ಲುಪು ತಿರುಪುತೇಂದ್ರ, ನರಸಿಂಹ ಮತ್ತು ಬೆಂಗಳೂರಿನ ವೈ.ಎಸ್.ಬಾಬು, ದಾವಣಗೆರೆಯ ಕೆಟಿ ಶಿವಾನಂದ ಪೂಜಾರಿ ಬಂಧಿತ ಆರೋಪಿಗಳು.