ತುಮಕೂರು: ಮುಖ್ಯವಾಗಿ ಹೃದಯ, ಶ್ವಾಸಕೋಶ ಆರೋಗ್ಯವಾಗಿಟ್ಟುಕೊಂಡಾಗ ಮಾತ್ರ ಕೊರೊನಾದಂತಹ ಸೋಂಕಿನಿಂದ ಪಾರಾಗಬಹುದು. ಹೀಗಾಗಿ ಜನರು ತಂಬಾಕು ಬಳಕೆಯಿಂದ ದೂರವಿರಬೇಕು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆ ಮಾತನಾಡಿರುವ ಶ್ರೀಗಳು, ಕೊರೊನಾ ಸೋಂಕು ತಗುಲಿದ ಇತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಎಷ್ಟೇ ಚಿಕಿತ್ಸೆ ನೀಡಿದ್ರೂ ಅದು ಸಫಲವಾಗುತ್ತಿಲ್ಲ. ತಂಬಾಕು ಸೇವಿಸುತ್ತಿರೋ ಅನೇಕರು ಮಾರಣಾಂತಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸಿಗರೇಟು ಸೇರಿದಂತೆ ತಂಬಾಕು ಪ್ಯಾಕೇಟ್ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮೂದಿಸಲಾಗಿರುತ್ತದೆ.
ಆದರೆ ಬಳಸುತ್ತಿರುವುದು ನೋಡಿದ್ರೆ ಜನರು ತಮ್ಮ ಆರೋಗ್ಯದ ಬಗ್ಗೆ ಎಷ್ಟರ ಮಟ್ಟಿಗೆ ನಿಷ್ಕಾಳಜಿ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ. ಉತ್ತಮ ಆರೋಗ್ಯ ಇರಿಸಿಕೊಳ್ಳಬೇಕೆಂದ್ರೆ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಕಿವಿಮಾತು ಮಾಡಿದ್ದಾರೆ.
ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ.. ಅರ್ಧಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಸಚಿವ