ತುಮಕೂರು: ಸಿದ್ದರಾಮಯ್ಯನವರನ್ನು ಬಡವರ ಮುಖಂಡ ಅಂತಾ ನೋಡಬೇಕೆ ಹೊರತು, ಕಾಂಗ್ರೆಸ್ ಪಕ್ಷದ ಮುಖಂಡ ಅಂತಾ ನೋಡಬಾರದು. ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಸ್ವಾಗತ ಸಮಿತಿ ಅಧ್ಯಕ್ಷನಾಗಿದ್ದೇನೆ. ಜಿಲ್ಲೆಯ ಎಲ್ಲಾ ಭಾಗಗಳಿಂದ ಸಿದ್ದರಾಮಯ್ಯನವರ ಅಭಿಮಾನಿಗಳು ಬರ್ತಾರೆ. ಸಿದ್ದರಾಮಯ್ಯ ತಳ ಸಮುದಾಯದಿಂದ ಹಿಡಿದು ಎಲ್ಲಾ ಸಮುದಾಯಗಳ ಮುಖಂಡ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಕಾಲದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಒಬ್ಬ ರಾಜಕಾರಣಿ 75 ವರ್ಷ ಜನರ ಮಧ್ಯೆ ಸೇವೆ ಮಾಡೋದು ಬಹಳ ದೊಡ್ಡ ಸಾಧನೆಯಾಗಿದೆ. ನಾನು ಯಾವತ್ತೂ ನನ್ನ ಹುಟ್ಟುಹಬ್ಬ ಮಾಡಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ರು. ಆದ್ರೆ ನಾವು ಒಪ್ಪಿಸಿ, ಈ ಬಾರಿ ಆಚರಣೆ ಮಾಡ್ತಾ ಇದ್ದೀವಿ. ಕಷ್ಟಪಟ್ಟು ಅವರ ಮನವೊಲಿಸಿದ್ದೇವೆ ಎಂದರು.
ಸಿದ್ದರಾಮೋತ್ಸವ ಅಲ್ಲಾ 75ನೇ ಅಮೃತ ಮಹೋತ್ಸವ ಇದು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್, ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಬರ್ತಾರೆ. ಸುಮಾರು 5 ಲಕ್ಷಕ್ಕೂ ಅಧಿಕ ಜನ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ರು.
ಇದನ್ನೂ ಓದಿ:'ಇಂದು ಸಿದ್ದರಾಮೋತ್ಸವ, ಶಿವಕುಮಾರೋತ್ಸವ, ನಾಳೆ ಪರಮೇಶ್ವರೋತ್ಸವ': ಸಿ.ಸಿ ಪಾಟೀಲ್ ವ್ಯಂಗ್ಯ