ETV Bharat / state

ಬಟ್ಟೆ ನೋಡಿ ಶೋ ರೂಮ್ ಸಿಬ್ಬಂದಿ ಅವಮಾನಿಸಿದ ಆರೋಪ: ಕೆರಳಿದ 'ಕೆಂಪೇಗೌಡ' ಮಾಡಿದ್ದೇನು?

ವಾಹನ ಖರೀದಿಸಲು ಬಂದ ಗ್ರಾಹಕರೋರ್ವರಿಗೆ ಅವರು ಧರಿಸಿದ್ದ ಬಟ್ಟೆ ನೋಡಿ ಕಾರು ಶೋ ರೂಮ್​​ ಸಿಬ್ಬಂದಿ ಹಿಯಾಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೋಪಗೊಂಡ ವ್ಯಕ್ತಿ ಕೇವಲ ಒಂದೇ ಗಂಟೆಯಲ್ಲೇ ಹಣ ಹೊಂದಿಸಿ ವಾಹನ ಡೆಲಿವರಿ ನೀಡುವಂತೆ ಪಟ್ಟು ಹಿಡಿದ ಘಟನೆ ತುಮಕೂರಲ್ಲಿ ನಡೆದಿದೆ.

Showroom staff insulted a man at Tumkur
ವ್ಯಕ್ತಿ ಧರಿಸಿದ್ದ ಬಟ್ಟೆ ನೋಡಿ ಅವಮಾನಿಸಿದ ಶೋ ರೂಮ್ ಸಿಬ್ಬಂದಿ
author img

By

Published : Jan 22, 2022, 10:26 PM IST

ತುಮಕೂರು: ವಾಹನ ಖರೀದಿಸಲು ಬಂದ ವ್ಯಕ್ತಿ ಧರಿಸಿರುವ ಬಟ್ಟೆ ನೋಡಿ ಕಾರು ಶೋ ರೂಮ್​ ಸಿಬ್ಬಂದಿ ಹಿಯಾಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಅಪಮಾನಗೊಂಡ ಗ್ರಾಹಕ, ಒಂದು ಗಂಟೆ ಅವಧಿಯಲ್ಲಿ ಬರೋಬ್ಬರಿ ₹10 ಲಕ್ಷ ಹೊಂದಿಸಿ ಕಾರು ಡೆಲಿವರಿ ಕೊಡುವಂತೆ ಪಟ್ಟು ಹಿಡಿದಿದ್ದ ಘಟನೆ ನಗರದಲ್ಲಿ ನಡೆದಿದೆ.

ಗ್ರಾಹಕ ಮತ್ತು ಶೋ ರೂಮ್​ ಅಧಿಕಾರಿಗಳ ನಡುವೆ ನಡೆದಿರುವ ಮಾತುಕತೆ

ನಡೆದಿದ್ದೇನು? ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡ ಎಂಬ ವ್ಯಕ್ತಿ ವಾಹನ ಖರೀದಿಸಲು ತುಮಕೂರು ನಗರದಲ್ಲಿರುವ ಕಾರು ಶೋ ರೂಮ್​ ತೆರಳಿದ್ದರು. ಈ ವೇಳೆ ಗ್ರಾಹಕ ಧರಿಸಿದ್ದ ಬಟ್ಟೆ ಕಂಡು ಶೋ ರೂಮ್​​ ಸಿಬ್ಬಂದಿ ಹತ್ತು ರೂಪಾಯಿ ಕೊಡುವ ಯೋಗ್ಯತೆ ಇಲ್ಲ. ವಾಹನ ತೆಗೆದುಕೊಳ್ಳಲು ಬಂಂದಿದೆಯಾ ಎಂದು ತನಗೆ ಹಿಯಾಳಿಸಿದ್ದಾರೆ ಎಂದು ಗ್ರಾಹಕ ಆರೋಪಿಸಿದ್ದಾರೆ.

ಅವಮಾನಗೊಂಡ ಗ್ರಾಹಕ ಕೆಂಪೇಗೌಡ

ಇದನ್ನೂ ಓದಿ: ರಾಜ್ಯದಲ್ಲಿಂದು 42,470 ಜನರಿಗೆ ಕೊರೊನಾ ಪಾಸಿಟಿವ್.. 35 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಕೆ

ಇದರಿಂದ ಕೋಪಗೊಂಡ ಕೆಂಪೇಗೌಡ ಒಂದು ಗಂಟೆ ಅವಧಿಯಲ್ಲಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ 10 ಲಕ್ಷ ರೂ.ಗಳನ್ನು ಹೊಂದಿಸಿ ವಾಹನ ನೀಡುವಂತೆ ಶೋ ರೂಮ್​​ನವರಿಗೆ ಪಟ್ಟು ಹಿಡಿದ್ದಾನೆ. ಆಗ ಶೋ ರೂಮ್​ ಸಿಬ್ಬಂದಿ ವಾಹನ ನೀಡಲು 3 ದಿನ ಕೇಳಿದ್ದಾರೆ. ಇದರ ನಡುವೆ ಅವಮಾನಗೊಂಡ ಕೆಂಪೇಗೌಡ ಪೊಲೀಸ್​​ ರಾಣೆಯಲ್ಲಿ ದೂರು ದಾಖಲಿಸಿದ್ದನು.

ಕೊನೆಗೆ ಪೊಲೀಸರು ಶೋ ರೂಮ್​​ ಸಿಬ್ಬಂದಿ ಹಾಗೂ ಅಲ್ಲಿನ ಅಧಿಕಾರಿಗಳಿಂದ ಕ್ಷಮೆಯಾಚನೆ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.