ತುಮಕೂರು: ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಂ. ಟಿ. ಕೃಷ್ಣಪ್ಪ ಸೋಲುಂಡು ಬೇರೆಯವರ ಮೇಲೆ ಹೊಣೆ ಹೊರಿಸುವುದು ಎಷ್ಟು ಸರಿ? ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಎಸ್. ಆರ್. ಶ್ರೀನಿವಾಸ್ ಹೇಳಿದ್ದಾರೆ.
ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪಗೆ ಹುಚ್ಚು ನಾಯಿ ಕಡಿದಿರಬಹುದು. 2008ರಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಸೋತಾಗ ನಾನು ಸೋಲಿಸಿದ್ದೆನೇ?. ಅಂದು ಜಗ್ಗೇಶ್ ಗೆದ್ದಿದ್ದರು. ಜಗ್ಗೇಶ್ ರಾಜೀನಾಮೆ ನಂತರ ನಡೆದ ಉಪಚುನಾವಣೆಯಲ್ಲಿ ಎಂ. ಟಿ. ಕೃಷ್ಣಪ್ಪ ಗೆಲುವು ಸಾಧಿಸಿದ್ದರು ಎಂದರು.
ಕೃಷ್ಣಪ್ಪ ಜೊತೆಗೆ ಇತರೆ ನಾಯಕರು ಕೂಡ ಈ ಕುರಿತಂತೆ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ ಎಂದು ಪರೋಕ್ಷವಾಗಿ ಜೆಡಿಎಸ್ ಮುಖಂಡರ ವಿರುದ್ಧ ಹರಿಹಾಯ್ದರು.