ತುಮಕೂರು: ಶಿರಾ ನಗರದ ಸಾರ್ವಜನಿಕ ಆಸ್ಪತ್ರೆ ಅವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷಗಳೇ ಕಳೆದಿದೆ. ರೋಗಿಗಳು ಹಾಗೂ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಗೆ ದಿನಕ್ಕೆ ಮೂರರಿಂದ ನಾಲ್ಕು ಸಾವಿರ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹೆಚ್ಚಿನವರು ಕುಡಿಯುವ ನೀರಿಗಾಗಿ ಈ ಘಟಕವನ್ನು ಅವಲಂಬಿಸಿದ್ದರು. ಸುತ್ತಮುತ್ತಲಿನ ಹಲವಾರು ಮಂದಿ, ಬೀದಿಬದಿಯ ವ್ಯಾಪಾರಿಗಳು ಮತ್ತು ಸಣ್ಣ-ಪುಟ್ಟ ಹೋಟೆಲ್ಗಳಿಗೆ ಈ ಶುದ್ಧ ನೀರಿನ ಘಟಕವನ್ನು ಬಿಟ್ಟರೆ ಬೇರೆ ಯಾವುದೇ ನೀರಿನ ವ್ಯವಸ್ಥೆ ಇಲ್ಲ.
ಇದನ್ನೂ ಓದಿ: ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು
ಶುದ್ಧ ನೀರಿನ ಘಟಕ ಕೆಟ್ಟು ನಿಂತ ಪರಿಣಾಮ ಅನಿವಾರ್ಯವಾಗಿ ಬೀದಿಬದಿಯ ವ್ಯಾಪಾರಿಗಳು ಮತ್ತು ಸಣ್ಣಪುಟ್ಟ ಹೋಟೆಲ್ನವರು ಹಣ ಕೊಟ್ಟು ನೀರು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಬಾಟಲ್ ನೀರು ಪಡೆದರೆ, ಇಲ್ಲದವರು ನೀರಿಗಾಗಿ ಪರದಾಡಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.