ತುಮಕೂರು : ಸಹಜವಾಗಿ ಕ್ರೀಡಾಕೂಟಗಳಲ್ಲಿ ಟ್ರೋಫಿ, ಹಣವನ್ನು ವಿಜೇತರಿಗೆ ಬಹುಮಾನವಾಗಿ ನೀಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ನಡೆದ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ವಿಜೇತರಿಗೆ ಬಹುಮಾನವಾಗಿ ಎರಡು ಟಗರುಗಳನ್ನು ಇರಿಸಿದ್ದು ಬಹು ಚರ್ಚೆಗೆ ಗ್ರಾಸವಾಗಿದೆ.
![sheep prize in cricket tournament news tumakuru](https://etvbharatimages.akamaized.net/etvbharat/prod-images/kn-tmk-01-cricket-script-7202233_29112020175240_2911f_1606652560_229.jpg)
ಶಿರಾ ತಾಲೂಕು ಚಿಕ್ಕಹುಲಿಕುಂಟೆ ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, ಎರಡು ಟಗರುಗಳನ್ನು ಬಹುಮಾನವಾಗಿ ಇರಿಸಲಾಗಿತ್ತು. ನವೆಂಬರ್ 28-29ರಂದು ಎರಡು ದಿನಗಳ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಆಂಧ್ರದ ಮೋರಬಾಗಿಲು ಗ್ರಾಮದಿಂದ ಒಂದು ತಂಡ, ಪಟ್ಟನಾಯಕನಹಳ್ಳಿ, ಬರಗೂರು, ಶಿರಾ ನಗರದಿಂದ ಎರಡು ತಂಡಗಳು ಸೇರಿದಂತೆ ಒಟು 23 ತಂಡ ಭಾಗವಹಿಸಿದ್ದವು.
![sheep prize in cricket tournament news tumakuru](https://etvbharatimages.akamaized.net/etvbharat/prod-images/kn-tmk-01-cricket-script-7202233_29112020175240_2911f_1606652560_722.jpg)
ಮೊದಲನೆ ಬಹುಮಾನವಾಗಿ 10 ಸಾವಿರ ರೂ. ನಗದು, ಒಂದು ಕೊಬ್ಬಿದ ಟಗರು ಜತೆಗೆ 1 ಟ್ರೋಫಿ, ಎರಡನೆ ಬಹುಮಾನವಾಗಿ 5 ಸಾವಿರ ರೂ. ನಗದು ಮತ್ತು ಒಂದು ಟಗರು ಜತೆಗೆ ಟ್ರೋಫಿಯೂ ಸೇರಿತ್ತು.
![sheep prize in cricket tournament news tumakuru](https://etvbharatimages.akamaized.net/etvbharat/prod-images/kn-tmk-01-cricket-script-7202233_29112020175240_2911f_1606652560_121.jpg)
![sheep prize in cricket tournament news tumakuru](https://etvbharatimages.akamaized.net/etvbharat/prod-images/kn-tmk-01-cricket-script-7202233_29112020175240_2911f_1606652560_510.jpg)
ಇದನ್ನೂ ಓದಿ: ಗಂಡು ಮೆಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು: ಮೈನವಿರೇಳಿಸಿದ ಕಾಳಗ