ETV Bharat / state

ಶಾಲೆಗಳನ್ನು ಕೇಸರೀಕರಣ ಮಾಡಿ ವಿವೇಕಾನಂದರಿಗೆ ಅವಮಾನ: ಕೆ ಎನ್ ರಾಜಣ್ಣ - ETv Bahart news

ನಮ್ಮ ದೇಶದ ಮಹಾನ್ ವ್ಯಕ್ತಿಯ ಹೆಸರನ್ನು ತಂದು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕೇಸರೀಕರಣದ ಮೂಲಕ ವಿವೇಕಾನಂದರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಆರೋಪಿಸಿದರು.

Congress leader KN Rajanna
ಕಾಂಗ್ರೆಸ್ ಮುಖಂಡ ಕೆಎನ್ ರಾಜಣ್ಣ
author img

By

Published : Nov 15, 2022, 5:24 PM IST

Updated : Nov 15, 2022, 5:43 PM IST

ತುಮಕೂರು: ನಮ್ಮ ದೇಶದ ಮಹಾನ್ ವ್ಯಕ್ತಿಯ ಹೆಸರನ್ನು ತಂದು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕೇಸರೀಕರಣ ಮಾಡಿ ವಿವೇಕಾನಂದರಿಗೆ ಅವಮಾನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಆರೋಪಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವೇಕಾನಂದರು ಯಾವತ್ತೂ ಕೂಡ ತಮ್ಮ ಹೆಸರಿನಲ್ಲಿ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯಿರಿ ಎಂದು ಹೇಳಿರಲಿಲ್ಲ. ಬದಲಾಗಿ ಅವರು ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರಚುರಪಡಿಸಿ ಗೌರವ ಸಿಗುವಂತೆ ಮಾಡಿದವರು. ಅಂತವರ ಹೆಸರನ್ನು ಸಂಕುಚಿತಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

ಶಾಲೆಗಳನ್ನು ಕೇಸರೀಕರಣ ಮಾಡಿ ವಿವೇಕಾನಂದರಿಗೆ ಅವಮಾನ: ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬಂದಿರುವುದು ಮೂಲ ಆರ್​ಎಸ್​ಎಸ್​ ಹಿನ್ನೆಲೆಯಿಂದ. ಬಿಜೆಪಿ ಮುಖಂಡರು ಹಾಗೂ ಪಕ್ಷಕ್ಕೆ ಸ್ವಂತಿಕೆ ಎನ್ನುವುದೇ ಇಲ್ಲ. ಅವರು ಕೇಶವ ಕೃಪಾದಿಂದ ಬರುವಂತಹ ಸೂಚನೆಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಿರ್ಧಾರ ಕೈಬಿಡಬೇಕು: ಎಚ್.ಕೆ.ಪಾಟೀಲ್

Last Updated : Nov 15, 2022, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.