ETV Bharat / state

ಕನಸಾಗಿಯೇ ಉಳಿದ  ರೋಪ್​​ವೇ  ಕಾಮಗಾರಿ... ಪ್ರವಾಸಿಗರ ಆಸೆ ಈಡೇರುವುದು ಯಾವಾಗ ?

ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ವಿಷಯದಲ್ಲಿ ಸದಾ ವಿಘ್ನಗಳು ಎದುರಾಗುತ್ತಿವೆ. ಬೆಟ್ಟಕ್ಕೆ ರೋಪ್ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ.

ಮಧುಗಿರಿ ಬೆಟ್ಟ
author img

By

Published : Jun 24, 2019, 12:17 PM IST

ತುಮಕೂರು : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಮಧುಗಿರಿಯ ಏಕಶಿಲಾ ಬೆಟ್ಟ. ಏಷ್ಯಾದಲ್ಲೇ ಏಕಶಿಲಾ ಶಿಖರಗಳಲ್ಲೊಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಪ್ರವಾಸಿಗರಿಗೆ ಅನುಕೂಲವಾಗುವ ರೋಪ್ ವೇ ಅವಳಡಿಕೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ.

ಜಿಲ್ಲೆಯ ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ವಿಷಯದಲ್ಲಿ ಸದಾ ವಿಘ್ನಗಳು ಎದುರಾಗುತ್ತಿವೆ. ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ. ರೋಪ್ ವೇ ನಿರ್ಮಿಸಲು ಸ್ಥಳ ಪೂರಕವಾಗಿಲ್ಲ ಎಂದು ಎರಡು ಬಾರಿ ಪ್ರಸ್ತಾವನೆ ತಿರಸ್ಕಾರಗೊಂಡಿತ್ತು.

ಈ ಹಿಂದೆ ಪರಿಶೀಲಿಸಿದ್ದ ಕೋಲ್ಕತ್ತಾ ಮೂಲದ ತಾಂತ್ರಿಕ ಪರಿಣಿತರ ತಂಡ ಸರಕಾರಕ್ಕೆ ವರದಿ ನೀಡಿತ್ತು. ಮಧುಗಿರಿ ಪಟ್ಟಣದ ನ್ಯಾಯಾಲಯ ಸಂಕೀರ್ಣದ ಸಮೀಪದಿಂದ ಏಕಶಿಲಾ ಬೆಟ್ಟದ ಮೇಲಿನ ನವಿಲು ದೋಣೆವರೆಗೂ ರೋಪ್ ವೇ ಅಳವಡಿಸುವುದು ಸೂಕ್ತವಾದ ಸ್ಥಳವೆಂದು ತಂಡವು ವರದಿ ನೀಡಿತ್ತು.

ಮಧುಗಿರಿ ಬೆಟ್ಟ

ಆದ್ರೆ, ಅದನ್ನು ಕೇಂದ್ರದ ಪುರಾತತ್ವ ಇಲಾಖೆ ತಿರಸ್ಕರಿಸಿದೆ. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಪೂರಕವಲ್ಲ ಎಂದು ಎರಡು ಬಾರಿ ತಿರಸ್ಕಾರಗೊಂಡಿದೆ. ಪ್ರಸ್ತಾವನೆ ಹಂತದಲ್ಲಿದ್ದು, ಕೇಂದ್ರ ಸರಕಾರ ಮತ್ತು ಕೆಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಬೇಕಿದೆ.

ಹೆಚ್ಚು ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಅವರಿಂದ ಸಹಾಯ ತೆಗೆದುಕೊಂಡು ರೋಪ್ ಅಳವಡಿಕೆಯ ಯೋಜನೆ ಅನುಷ್ಠಾನದ ಬಗ್ಗೆ ಚಿಂತಿಸಲಾಗುವುದು ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ತಿಳಿಸಿದ್ದಾರೆ.

ಪ್ರಕೃತಿ ಸೌಂದರ್ಯ ದೊಂದಿಗೆ ಐತಿಹಾಸಿಕ ಗತವೈಭವ ಸಾರುವ ಮದುಗಿರಿ ಬೆಟ್ಟ ಪ್ರವಾಸಿಗರ ಫೇವರಿಟ್ ಪ್ಲೇಸ್ ಆಗಿದೆ. ವೀಕೆಂಡ್ ನಲ್ಲಿ ಇಲ್ಲಿಗೆ ಬಂದು ಬೆಟ್ಟಹತ್ತಿ ಪ್ರಕೃತಿ ಮಡಿಲಲ್ಲಿ ಒಂದಿಷ್ಟು ಸಮಯ ಕಳೆಯುವ ಪ್ರವಾಸಿಗರಿಗೆ ಈ ರೋಪ್ ವೇ ಅನುಕೂಲವಾಗುತ್ತೆ ಅನ್ನೋದು ಇಲ್ಲಿನ ಜನರ ಅಭಿಪ್ರಾಯ.

Intro:ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಕೆಗೆ ತಾಂತ್ರಿಕ ಅಡಚಣೆ….ಪ್ರವಾಸೋದ್ಯಮಕ್ಕೆ ಹಿನ್ನೆಡೆ….
ತುಮಕೂರು : ತುಮಕೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಮಧುಗಿರಿಯ ಏಕಶಿಲಾ ಬೆಟ್ಟ. ಏಷಿಯಾದಲ್ಲೆ ಏಕಶಿಲಾ ಶಿಖರಗಳಲ್ಲೊಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಪ್ರವಾಸಿಗರಿಗೆ ಅನುಕೂಲವಾಗುವ ರೋಪ್ ವೇ ಅವಳಡಿಕೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ. ಈ ಬೆಳವಣಿಗೆ ಒಂದು ರೀತಿ ಪ್ರವಾಸೋದ್ಯಮಕ್ಕೆ ಹಿನ್ನೆಡೆ ಎಂದೇ ಅಭಿಪ್ರಾಯಿಸಲಾಗುತ್ತಿದೆ.
ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ವೀಕೆಂಡ್ ನಲ್ಲಿ ಸಾಹಸಿಗಳು ಮತ್ತು ಪ್ರವಾಸಿಗರು ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟದತ್ತ ಭೇಟಿ ನೀಡುತ್ತಾರೆ. ಮುಗಿಲೆತ್ತರಕ್ಕೆ ಇರುವ ಬೆಟ್ಟವನ್ನೇರಲು ಪ್ರವಾಸಿಗರು ಅಲ್ಲಿರುವ ಕೋಟೆಯ ಕಟ್ಟಡಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಾರೆ. ಮೇಲ್ಬಾಗದಿಂದ ನಿಂತು ಸುತ್ತಮುತ್ತಲೂ ಪ್ರಕೃತಿ ಸೌಂದಯಱ ಸವಿಯುತ್ತಾರೆ. ಕೆಲವರಂತೂ ಬೆಟ್ಟವೇರುವ ಭರದಲ್ಲಿ ಹಲವು ಅನಾಹುತಗಳಿಗೆ ಒಳಗಾಗಿದ್ದಾರೆ. ಪ್ರವಾಸಿಗರಂತೂ ಶನಿವಾರ ಮತ್ತು ಭಾನುವಾರ ಏಕಶಿಲಾ ಬೆಟ್ಟವೇರಲು ದಂಡುದಂಡಾಗಿ ಆಗಮಿಸುತ್ತಾರೆ.
ರಾಜ ಹಿರೇಗೌಡ ಎಂಬಾತ ಕಟ್ಟಿಸಿದ ಕೋಟೆಯಲ್ಲಿ ಹಲವು ವೈಶಿಷ್ಟ್ಯಗಳಿವೆ. ಕಾಲನಂತರದಲ್ಲಿ ಕೋಟೆಯನ್ನು ವಶಕ್ಕೆ ಪಡೆದು ರಾಜರುಗಳು ಅಭಿವೃದ್ಧಿ ಪಡಿಸಿ ಆಡಳಿತವನ್ನು ಬದಲಾಯಿಸಿದ್ದಾರೆ. ಕುದುರೆಗಳ ಮೇಲೆ ಕೈ ಕಾಲುಗಳಿಗೆ ಗಾಯಗಳಾದ್ರೆ ಔಷಧಿ ನೀಡುವ ಸ್ಥಳ ತುಪ್ಪದ ಕಣಜ, ನವಿಲುಗಳು ನೀರು ಕುಡಿಯುವ ಸ್ಥಳ ನವಿಲು ದೊಣೆ ಇಂತಹ ಅಪರೂಪದ ಸ್ಥಳವಿದೆ. ಅಲ್ಲದೆ ವೆಂಕಟರಮಣಸ್ವಾಮಿ ದೇಗುಲ, ಮುಸ್ಲೀಂ, ಜೈನರು, ಶಿವನ ಆರಾಧಕರು ನೆಲೆಸಿದ್ದರು ಎಂಬುದಕ್ಕೆ ಕುರುಹುಗಳು ಬೆಟ್ಟದ ಸುತ್ತಲೂ ಇರುವುದು ಸಾಕ್ಷಿಯಾಗಿದೆ. ಚಿತ್ರದುಗಱದ ಕೋಟೆಗೂ, ಮಧುಗಿರಿ ಏಕಶಿಲಾ ಬೆಟ್ಟದಲ್ಲಿರೋ ಗೂ ಆಂತರಿಕ ಸಂಬಂಧವಿದೆ.

ಹೀಗೆ ಇತಿಹಾಸ ಮತ್ತು ಸೌಂದಯಱವನ್ನು ಹುದುಗಿರಿಸಿಕೊಂಡಿರೋ ಮಧುಗಿರಿ ಏಕಶಿಲಾ ಬೆಟ್ಟವನ್ನು ನೋಡಲು ನೂರಾರು ಮೆಟ್ಟಿಲುಗಳನ್ನು ಹತ್ತಿ ಪ್ರವಾಸಿಗರು ಹೋಗಬೇಕಿದೆ. ಬೆಟ್ಟಕ್ಕೆ ರೋಪ್ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ. ಪೂರಕವಾಗಿಲ್ಲ ಎಂದು ಎರಡು ಬಾರಿ ಪ್ರಸ್ತಾವನೆ ತಿರಸ್ಕಾರ ಗೊಂಡಿದೆ.
ರೋಪ್ ವೇ ಅಳವಡಿಸುವ ಸಂಬಂಧ ಈ ಹಿಂದೆ ಪರಿಶೀಲಿಸಿದ್ದ ಕೊಲ್ಕತ್ತಾ ಮೂಲದ ತಾಂತ್ರಿಕ ಪರಿಣಿತರ ತಂಡ ಸರಕಾರಕ್ಕೆ ವರದಿ ನೀಡಿತ್ತು. ಮಧುಗಿರಿ ಪಟ್ಟಣದ ನ್ಯಾಯಾಲಯ ಸಂಕೀಣಱದ ಸಮೀಪದಿಂದ ಏಕಶಿಲಾ ಬೆಟ್ಟದ ಮೇಲಿನ ನವಿಲು ದೊಣೆ ವರೆಗೆ ರೋಪ್ ವೇ ಅಳವಡಿಸುವುದು ಸೂಕ್ತವಾದ ಸ್ಥಳವೆಂದು ತಂಡವು ವರದಿ ನೀಡಿತ್ತು. ಆದ್ರೆ ಅದನ್ನು ಕೇಂದ್ರದ ಪುರಾತತ್ವ ಇಲಾಖೆ ತಿರಸ್ಕರಿಸಿದೆ.
ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಪೂರಕವಲ್ಲ ಎಂದು ಎರಡು ಬಾರಿ ತಿರಸ್ಕಾರಗೊಂಡಿದೆ. ಪ್ರಸ್ತಾವನೆ ಹಂತದಲ್ಲಿದ್ದು ಕೇಂದ್ರ ಸರಕಾರ ಮತ್ತು ಕೆಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಬೇಕಿದೆ. ಹೆಚ್ಚು ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಅವರಿಂದ ಸಹಾಯ ತೆಗೆದುಕೊಂಡು ರೋಪ್ ಅಳವಡಿಕೆಯ ಯೋಜನೆ ಅನುಷ್ಟಾನದ ಬಗ್ಗೆ ಚಿಂತಿಸಲಾಗುವುದು ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ತಿಳಿಸಿದ್ದಾರೆ.
ಈ ಯೋಜನೆ ಜಾರಿಯಾದ್ರೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಇದ್ರಿಂದ ಪ್ರವಾಸೋದ್ಯಮ ವೇಗವಾಗಿ ಬೆಳೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Body:shanthinath, tumakuruConclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.