ETV Bharat / state

ಜುಲೈ ಒಂದರಿಂದ ನಿರೀಕ್ಷೆಯಂತೆ ಅಕ್ಕಿ ವಿತರಣೆ ಮಾಡಲಾಗುವುದು: ಸಚಿವ ಸತೀಶ್ ಜಾರಕಿಹೊಳಿ - ಈಟಿವಿ ಭಾರತ್ ಕನ್ನಡ ಸುದ್ದಿ

ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ 5 ಕೆಜಿಗೆ 5 ಕೆಜಿ ಸೇರಿಸಿ ಅಕ್ಕಿ ಕೊಡುತ್ತೇವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ
author img

By

Published : Jun 26, 2023, 3:16 PM IST

ಅಕ್ಕಿ ವಿತರಣೆ ಮಾಡುವ ಕುರಿತು ಸಚಿವ ಸತೀಶ್​ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದಾರೆ

ತುಮಕೂರು : ಜುಲೈ 1ಕ್ಕೆ ಅಕ್ಕಿ ನೀಡಿಕೆ ವಿಚಾರದಲ್ಲಿ ತೊಂದರೆ ಏನೂ ಇಲ್ಲ. ಮುಂದಿನ ತಿಂಗಳು ನೀಡುತ್ತೇವೆ. ಈ ತಿಂಗಳು ಆಗಲಿಲ್ಲ‌ ಅಂದ್ರೆ ಮುಂದಿನ ತಿಂಗಳು ಕೊಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿತರಣೆ ತಡ ಆಗಬಹುದು, 5 ಕೆಜಿ ಈಗಾಗಲೇ ಇದ್ಯಲ್ಲ. ಎಲ್ಲಾ ರಾಜ್ಯದಿಂದ ಹಾಗೂ ಕೇಂದ್ರದಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ. ಒಂದು ತಿಂಗಳು ತಡ ಆಗಬಹುದು ಬರುತ್ತೆ ಎಂದರು.

ನಮಗೂ ಜವಾಬ್ದಾರಿ ಇದೆ: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೋರಾಟ ವಿಚಾರ, ಸದನದ ಒಳಗೆ ಹೋರಾಟ ಮಾಡುವುದಕ್ಕೆ ಆಗುವುದಿಲ್ಲ. ಹೊರಗಡೆ ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಇದೆ ಮಾಡಲಿ. ಆದರೆ ನಮಗೂ ಜವಾಬ್ದಾರಿ ಇದೆ ಎಂದು ಸಚಿವ ಜಾರಕಿಹೊಳಿ ಹೇಳಿದ್ರು.

5 ಕೆಜಿ‌ ಸೇರಿಸಿ 10 ಕೆಜಿ ಕೊಡ್ತೇವೆ: 10 ಮತ್ತು 5 ಕೆಜಿ ಅಕ್ಕಿ ಕೊಡಬೇಕೆಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಣಾಳಿಕೆಯಲ್ಲಿ ತೆಗೆದು ನೋಡಲಿ ನಾವು ಚುನಾವಣೆಯಲ್ಲಿ ಹೇಳಿದ್ವಿ. 5 ಕೆಜಿ‌ ಸೇರಿಸಿ 10 ಕೆಜಿ ಕೊಡ್ತೇವೆ ಅಂತಾ. ಅದನ್ನು ಕೊಡ್ತಿವಿ. ಐದು ಸೇರಿದಂತೆ 5 ಕೊಡುತ್ತೇವೆ ಎಂದರು.

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಸಹಕಾರ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಈಗ ಅಲ್ಲ ಮುಂದಿನ ಅವಧಿಯಲ್ಲಿ. ಸಿದ್ದರಾಮಯ್ಯ ಅವರ ನಂತರ ಎಂದು ಅವರು ಹೇಳಿದರು.

ಜುಲೈ 7ಕ್ಕೆ ಬಜೆಟ್ ಮಂಡನೆಗೆ ಸಿದ್ಧತೆ.. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳ ಕೇಂದ್ರೀಕೃತ ಬಜೆಟ್ ಮಂಡನೆಗೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ನಿರ್ಗಮಿತ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್​ ಅನ್ನು ಅಲ್ಪ ಪರಿಷ್ಕರಣೆಯೊಂದಿಗೆ ಅಂದಾಜು 3.25 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ಅವರು ತಯಾರಿಯನ್ನು ನಡೆಸುತ್ತಿದ್ದಾರೆ.

ತಮ್ಮ 14ನೇ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಅವರು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಜುಲೈ 7ಕ್ಕೆ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈಗಾಗಾಲೇ ನಿರ್ಗಮಿತ ಬಿಜೆಪಿ ಸರ್ಕಾರ 2023-24 ಸಾಲಿನ‌ ಬಜೆಟ್ ಅನ್ನು ಮಂಡಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾರಣ ಮತ್ತೆ ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಹೊಸ ಕಾಂಗ್ರೆಸ್ ಸರ್ಕಾರದ ಬಜೆಟ್ ಪಂಚ ಗ್ಯಾರಂಟಿ ಯೋಜನೆಗಳ ಕೇಂದ್ರೀಕೃತವಾಗಿರಲಿದೆ. ಬಜೆಟ್​ನಲ್ಲಿ ಪಂಚ ಗ್ಯಾರಂಟಿಗಳಿಗೆ ಮಾಡಿರುವ ಲೆಕ್ಕಾಚಾರವೇ ಪ್ರಮುಖ ಆದ್ಯತೆಯಾಗಿರಲಿದೆ.

ಪಂಚ ಗ್ಯಾರಂಟಿಗಳಿಗೆ ಬಹುತೇಕ ಬಜೆಟ್ ಅನುದಾನ ಮೀಸಲು: ಹೊಸ ಬಜೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಹಳೆ ಬಜೆಟ್​​ನ ಅನುದಾನದ ಮರು ಹೊಂದಾಣಿಕೆಗಷ್ಟೇ ಸೀಮಿತವಾಗಿರಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಜೆಟ್​ನಲ್ಲಿ ಹೊಸ ಸರ್ಕಾರದ ಯೋಜನೆಗಳಿಗೆ ಅನುದಾನದ ಮರುಹಂಚಿಕೆಯೂ ಇರಲಿದೆ. ಉಳಿದ ಹಾಗೆ ಪಂಚ ಗ್ಯಾರಂಟಿಗಳಿಗೆ ಬಹುತೇಕ ಬಜೆಟ್ ಅನುದಾನ ಮೀಸಲಿರಲಿದೆ ಎಂದು ಹೇಳಲಾಗಿದೆ. ಸುಮಾರು ಶೇ 15 ರಷ್ಟು ಬಜೆಟ್ ಹಣವನ್ನು ಪಂಚ ಯೋಜನೆಗಳಿಗೆ ಮೀಸಲಿರಿಸುವ ಲೆಕ್ಕಾಚಾರವೂ ನಡೆಯುತ್ತಿದೆ.

ಇದನ್ನೂ ಓದಿ: Karnataka Budget: ಜುಲೈ 7ಕ್ಕೆ 3.25 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ.. ಪಂಚ ಗ್ಯಾರಂಟಿಗಾಗಿ ರಾಜಸ್ವ ಸಂಗ್ರಹದ ಟಾರ್ಗೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.