ತುಮಕೂರು : ದೇಶದಲ್ಲಿ ಧರ್ಮ ಪ್ರಚಾರ ಎನ್ನುವುದು ಯಾರ ಸ್ವತ್ತೂ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮ ತಮ್ಮ ಸ್ವತ್ತು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಅನೇಕ ಜನ ನಾವು ಅದರ ಸಂರಕ್ಷಕರು ಎಂದು ಹೇಳಿಕೊಂಡು ತಿರುಗುತ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದರು. ಇಂದು (ಸೋಮವಾರ) ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಮಾತನಾಡಿದರು.
ಈ ಕ್ಷೇತ್ರದಲ್ಲಿ ಧರ್ಮ ಪ್ರಚಾರಕ್ಕಾಗಿ ನನಗೆ ಜವಾಬ್ದಾರಿ ಕೊಟ್ಟು ಬಾಳೆಹೊನ್ನೂರಿನ ಶ್ರೀ ಪರಮ ಪೂಜ್ಯ ರಂಭಾಪುರಿ ಮಠದ ಸ್ವಾಮೀಜಿಗಳು ಕಳುಹಿಸಿ ಕೊಟ್ಟಿದ್ದಾರೆ. ಹೀಗಾಗಿ ಇದನ್ನು ನನ್ನ ಜೀವನದಲ್ಲಿ ಮರೆಯುವುದಕ್ಕೆ ಸಾಧ್ಯವಿಲ್ಲ. ಆಧುನಿಕ ಜಗತ್ತಿನಲ್ಲಿ ನಮ್ಮೆಲ್ಲರಿಗೂ ಬೇಕಾಗಿರುವುದು ಧರ್ಮ ಎನ್ನುವಂತದ್ದು. ಆದರಿಂದ ಇವತ್ತು ಧರ್ಮ ಬಹಳ ಮುಖ್ಯವಾಗಿದ್ದು, ನಮ್ಮ ಸಂಸ್ಕೃತಿಗಳು, ಸಂಸ್ಕಾರಗಳು, ನಡೆ-ನುಡಿ ಇವುಗಳನ್ನು ಒಟ್ಟಾಗಿ ಧರ್ಮದಲ್ಲಿ ಸೇರಿಸಿ ಕಟ್ಟಿ ಇಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : Chamundi hill: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಆಚರಣೆ: ದೇವಸ್ಥಾನದ ಪ್ರಧಾನ ಆರ್ಚಕ ಶಶಿಧರ್ ದೀಕ್ಷಿತ್ ಹೇಳಿದ್ದೇನು..?
ಬಹುಶಃ ಭಾರತದಲ್ಲಿನ ಧಾರ್ಮಿಕ ಐಶ್ವರ್ಯ ಧಾರೆ ಎಲ್ಲರಿಗೂ ಸೇರಿರುವಂತಹದು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನದಲ್ಲಿ ಅವರವರ ಧರ್ಮವನ್ನು ಪಾಲಿಸಿಕೊಂಡು ಹೋಗಬಹುದು ಎಂದು ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಹಾಗಾಗಿ ಈ ದೇಶದಲ್ಲಿ ಹುಟ್ಟಿರುವ ಪ್ರಯೊಬ್ಬ ಭಾರತೀಯನಿಗೂ ಧರ್ಮ ಎಂಬುದು ಸೇರಬೇಕು. ಇಂತಹ ವಿಚಾರಧಾರೆಯ ಮೇಲೆ ನಾನು ನಂಬಿಕೆಯನ್ನು ಇಟ್ಟಿದ್ದೇನೆ.
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಸ್ವಾಮೀಜಿಗಳು ಸಹ ಇದೇ ವಿಚಾರಧಾರೆಗಳ ದೃಷ್ಟಿಯಲ್ಲಿ ಸಾಗುತ್ತಿದ್ದಾರೆ. ಧಾರ್ಮಿಕ ಮೌಲ್ಯಗಳನ್ನು ಸಾವಿರಾರು ಜನರಿಗೆ ತಲುಪಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅದೇ ರೀತಿ ಅವರ ಶಿಷ್ಯರು ಒಂದಕ್ಕೂ ಕೂಡ ಇದೇ ರೀತಿಯಲ್ಲಿ ಸಾಗುವಂತೆ ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯಗೆ 2ನೇ ಆಡಳಿತ ಸುಧಾರಣಾ ಆಯೋಗದ ವರದಿ ಸಲ್ಲಿಕೆ
ಪ್ರಸ್ತುತ ಕಾಲಘಟ್ಟದಲ್ಲಿ ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಸಾರ್ಥಕತೆಯನ್ನು ಗಳಿಸಿಕೊಂಡು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ಅದೇ ರೀತಿ ರಾಜ್ಯದಲ್ಲಿ ಆನೇಕ ಧಾರ್ಮಿಕ ಕ್ಷೇತ್ರಗಳು ಹಾಗೂ ಮಠಗಳು ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ ಕ್ಷೇತ್ರವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಈ ಬೆಳವಣಿಗೆ ಮೂಲಕ ಆಧುನಿಕ ಕರ್ನಾಟಕಕ್ಕೆ ದೊಡ್ಡ ಮಹತ್ವಪೂರ್ಣ ಬದಲಾವಣೆ ಆಗುತ್ತಿದೆ ಎಂದು ನಾನು ಭಾವಿಸಿಕೊಳ್ಳುತ್ತೇನೆ ಎಂದು ಪರಮೇಶ್ವರ್ ಹೇಳಿದರು. ಬಳಿಕ ಕ್ಷೇತ್ರದ ಅಭಿವೃದ್ಧಿ ಕುರಿತು ಸಭೆ ನಡೆಸಲು ನಾನು ಅಧಿಕಾರಗಳನ್ನು ಕರೆದಿದ್ದೇನೆ. ಹೀಗಾಗಿ ಹೊರಡುತ್ತಿದ್ದೇನೆ ಎಂದು ಪರಮೇಶ್ವರ್ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿದರು.
ಇದನ್ನೂ ಓದಿ : Lok Sabha election: ಲೋಕಸಭಾ ಹೊಂದಾಣಿಕೆ ವಿಚಾರವಾಗಿ ಹೆಚ್ಡಿಕೆ ಹೇಳಿದ್ದು ಹೀಗೆ