ತುಮಕೂರು: ಕೊರೊನಾ ಸೋಂಕು ಬಹುಬೇಗ ನಾಶವಾಗಬೇಕು ಎಂದು ಪ್ರಾರ್ಥಿಸಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರಿನ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಇಂದು ಗೋಧೂಳಿ ಲಗ್ನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವೀರಶೈವ ಧರ್ಮದ ಮಹಾಸಭಾದವರು ಮತ್ತು ಪಂಚಪೀಠಾಧೀಶ್ವರರ ಆದೇಶದಂತೆ ಶ್ರೀ ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಜಗತ್ತಿಗೆ ಬಂದಿರುವ ಮಾರಣಾಂತಿಕ ಕೊರನಾ ವೈರಸ್ ನಾಶವಾಗಬೇಕು. ಭಕ್ತರು ಆರೋಗ್ಯವಂತಾಗಬೇಕು ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರಾರ್ಥಿಸಿದರು. ಈ ಸಂದರ್ಭ ಚಿಕ್ಕಣ್ಣ ಗವಿ ಮಠದ ಸ್ವಾಮೀಜಿ ಹಾಜರಿದ್ದರು.