ಬಳ್ಳಾರಿ: ರಾಬಕೋ (ರಾಯಚೂರು, ಬಳ್ಳಾರಿ, ಕೊಪ್ಪಳ) ಹಾಲು ಒಕ್ಕೂಟದ ನಿರ್ದೇಶಕ ಚುನಾವಣೆಗೆ ಬುಧವಾರ ಮೂರು ನಾಮಪತ್ರಗಳು ಸಲ್ಲಿಕೆಯಾಗಿದೆ. ಏ.03 ರಂದು ಚುನಾವಣೆ ನಡೆಯಲಿದೆ.
ಒಕ್ಕೂಟದ ಚುನಾವಣೆ ಈ ಮುಂಚೆ ಏ.03 ರಂದು ನಿಗದಿಪಡಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಮೇ.05ಕ್ಕೆ ಮುಂದೂಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಸಿಂಧನೂರು, ಮಾನ್ವಿ ತಾಲೂಕಿನ ಒಕ್ಕೂಟದ ಕೆಲ ನಿರ್ದೇಶಕರು ಕಲಬುರಗಿ ಹೈಕೋರ್ಟ್‌ಗೆ ತೆರಳಿ ನಿಗದಿಯಾಗಿದ್ದ ದಿನಾಂಕ ದಂದೆ ಚುನಾವಣೆ ನಡೆಸುವಂತೆ ಕೋರಿದ್ದು ಹೈಕೋರ್ಟ್ ಸಮ್ಮತಿಸೂಚಿಸಿದೆ. ಈ ಹಿನ್ನೆಲೆ ಬುಧವಾರದಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.ರಾಬಕೊ ಹಾಲು ಒಕ್ಕೂಟದ ನಿರ್ದೇಶಕರ 12 ಸ್ಥಾನಗಳಲ್ಲಿ ಬಳ್ಳಾರಿ ಜಿಲ್ಲೆಯ ನಾಲ್ಕು ಸ್ಥಾನಗಳಿಗೆ ಬುಧವಾರ ಮೂರು ನಾಮಪತ್ರ ಸಲ್ಲಿಕೆಯಾದವು.
ಅಡವಿ ಆನಂದ ದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಶಾಸಕ ಭೀಮಾನಾಯ್ಕ, ಮಹಿಳಾ ಮೀಸಲು ಸ್ಥಾನಕ್ಕೆ ಕೂಡ್ಲಿಗಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ನಾಗಮಣಿ ಜಿಂಕಲ್, ಹಾರಕಬಾವಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಚ್.ಮರುಳ ಸಿದ್ದಪ್ಪ ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.
ಮಾ.26 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 27ರಂದು ಪರಿಶೀಲನೆ, 28ರಂದು ಹಿಂಪಡೆಯಬಹುದಾಗಿದೆ. ಏ.03ರಂದು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.