ETV Bharat / state

ಭಾರತೀಯ ರೈಲ್ವೆಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಲಾಭದಾಯಕವಾದ ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು..

ಪ್ರತಿಭಟನೆ
ಪ್ರತಿಭಟನೆ
author img

By

Published : Sep 19, 2020, 10:14 PM IST

ತುಮಕೂರು: ಭಾರತ ಸರ್ಕಾರದ ಒಡೆತನದ ಭಾರತೀಯ ರೈಲ್ವೆ ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ನಗರದ ರೈಲ್ವೆ ನಿಲ್ದಾಣದ ಬಳಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ ಪ್ರತಿಭಟನೆ ನಡೆಸಿತು.

ಲಾಭದಾಯಕವಾದ ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈಲ್ವೆಯನ್ನು ಖಾಸಗೀಕರಣ ಮಾಡುವುದರಿಂದ ಅನೇಕ ಕೂಲಿಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಅಷ್ಟೇ ಅಲ್ಲ,ರೈಲ್ವೆ ಕಾರ್ಮಿಕರ ಉದ್ಯೋಗ ಖಾಯಮಾತಿ, ಪಿಂಚಣಿ, ಸೂಪರ್ ವಾರ್ಷಿಕೋತ್ಸವದ ವಯಸ್ಸು, ಉಚಿತ ಪಾಸ್ ಮುಂತಾದ ಎಲ್ಲಾ ಹಕ್ಕುಗಳನ್ನು ಕಳೆದು ಕೊಂಡಂತಾಗುತ್ತದೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ ಪ್ರತಿಭಟನೆ

ಈ ವೇಳೆ ಮಾತನಾಡಿದ ಎಸ್ ಯುಸಿಐಎಸ್ ನಗರ ಕಾರ್ಯದರ್ಶಿ ಎನ್ ಸ್ವಾಮಿ, ರೈಲ್ವೆ ಇಲಾಖೆ ಲಾಭದಲ್ಲಿದೆ. ಇಂತಹ ಸಮಯದಲ್ಲಿ ಏಕೆ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದು ತಿಳಿಯುತ್ತಿಲ್ಲ. ಬಂಡವಾಳಗಾರರ ಕೈಯಲ್ಲಿ ಅಗಾಧ ಹಣವಿದೆ. ಅದನ್ನು ಹೂಡಿಕೆ ಮಾಡಲು ಕೃಷಿ ಹಾಗೂ ಸಾರ್ವಜನಿಕ ಉದ್ಯಮದಲ್ಲಿ ಅವಕಾಶವಿದೆ. ಹಾಗಾಗಿ, ಬಂಡವಾಳಗಾರರು ಸಾರ್ವಜನಿಕ ಉದ್ದಿಮೆಗೆ ಕೈ ಹಾಕುತ್ತಿದ್ದಾರೆ. ಇವರನ್ನು ಉದ್ಧಾರ ಮಾಡಲು ಲಾಭದಲ್ಲಿರುವ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.