ETV Bharat / state

ಆನ್​ಲೈನ್​ ಬೆಟ್ಟಿಂಗ್ ದಂಧೆ: ಉಪನ್ಯಾಸಕ ಸೇರಿ 6 ಜನರ ಬಂಧನ - Police raid on betting rig in tumkur

ಆನ್​ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್​ ನಡೆಸುತ್ತಿದ್ದ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Police raid on betting rig in tumkur
ಬೆಟ್ಟಿಂಗ್​ ದಂಧೆಕೋರರ ಬಂಧನ
author img

By

Published : Feb 10, 2020, 7:38 PM IST

ತುಮಕೂರು: ಆನ್​ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್​ ನಡೆಸುತ್ತಿದ್ದ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.

Police raid on betting rig in tumkur
ಬೆಟ್ಟಿಂಗ್​ ದಂಧೆಕೋರರ ಬಂಧನ

ಎಂಜಿನಿಯರಿಂಗ್​ ಉಪನ್ಯಾಸಕ ಮಹಾಂತೇಶ್​ ಹಾಗೂ ವಿದ್ಯಾರ್ಥಿಗಳಾದ ಅರ್ಜುನ್, ರಾಜೇಶ್, ದಿಲೀಪ್ ಕುಮಾರ್, ಅಶ್ವಿನ್, ಧನುಷ್​ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಫೆಬ್ರವರಿ 9ರಂದು ವಿಶೇಷ ಪೊಲೀಸ್ ತಂಡವು ನಗರದ ಬೀಚ್ ರಸ್ತೆಯಲ್ಲಿನ ಲಾಡ್ಜ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು ಮೊಬೈಲ್ ಮೂಲಕ ಲೋಟಸ್ ಎಂಬ ಅಪ್ಲಿಕೇಶನ್ ಹಾಗೂ ಸ್ಪೆಕ್ಟಿಕ್ಯುಲಸ್ ಎಂಬ ಆ್ಯಪ್ ಅನ್ನು ಬಳಸಿ ಬೆಟ್ಟಿಂಗ್​ನಲ್ಲಿ ತೊಡಗಿದ್ದರು ಎನ್ನಲಾಗಿದೆ.

ದಾಳಿ ವೇಳೆ 4 ಎಟಿಎಂ ಕಾರ್ಡ್​ಗಳು, 6 ಮೊಬೈಲ್​ಗಳು, 3 ಲೆಡ್ ಪೆನ್ನು ಮತ್ತು 68,730 ರೂ. ನಗದು ಸೇರಿದಂತೆ 4 ರಿಜಿಸ್ಟರ್ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನಗರದ ಬ್ಯಾಂಕ್​ವೊಂದರಲ್ಲಿ ಬಸವರಾಜ್, ರಂಜಿತ್, ನಿತಿನ್ ಎಂಬುವವರ ಹೆಸರಿನಲ್ಲಿ 3 ಖಾತೆಗಳನ್ನು ತೆರೆದು ಬೆಟ್ಟಿಂಗ್ ವ್ಯವಹರಿಸುತ್ತಿದ್ದರು. ಈವರೆಗೆ ಬೆಟ್ಟಿಂಗ್​ನಲ್ಲಿ ಅಂದಾಜು 6.47 ಲಕ್ಷ ರೂ. ವಹಿವಾಟು ನಡೆಸಿದ್ದಾರೆ. ಎಲ್ಲ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಟ್ಟಿಂಗ್ ಮೂಲಕ ದೊರೆತ ಹಣದಲ್ಲಿ ಶೇ.40ರಷ್ಟು ಹಣವನ್ನು ಸ್ಪೆಕ್ಟಿಕ್ಯುಲಸ್ ಆ್ಯಪ್​ನ್ನು ನೀಡಿದ್ದ ಗಿರಿ, ದಯಾನಂದ್, ಹರಿ ಎಂಬುವವರಿಗೆ ಸಂದಾಯ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಹಿರಂಗಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿ, ದಯಾನಂದ, ಹರಿ ಹಾಗೂ ರಾಕಿ ಎಂಬುವವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.