ತುಮಕೂರು: ತೆಲುಗು ಸಾಹಿತಿ ವರವರರಾವ್ ಅವರನ್ನು ಪಾವಗಡದಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಇಂದು ಪಾವಗಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
2005 ರ ಫೆ. 5 ರಂದು ಪಾವಗಡದ ವೆಂಕಟ್ಮನಹಳ್ಳಿಯಲ್ಲಿ ಕೆ.ಎಸ್.ಆರ್.ಪಿ ಕ್ಯಾಂಪ್ ಮೇಲೆ ನಕ್ಸಲ್ ದಾಳಿ ನಡೆದಿತ್ತು. ಅಂದಿನ ನಕ್ಸಲ್ ದಾಳಿಯಲ್ಲಿ ಕೆ.ಎಸ್. ಆರ್. ಪಿ ಪೊಲೀಸರು ಸೇರಿ ಏಳು ಜನ ಮೃತಪಟ್ಟಿದ್ದರು.
ಪ್ರಕರಣದಲ್ಲಿ ತೆಲುಗು ಕವಿ ವರವರ ರಾವ್ ಹೆಸರು ಕೇಳಿ ಬಂದಿತ್ತು. ಇಲ್ಲಿವರೆಗೂ ಈ ಪ್ರಕರಣಕ್ಕೆ ಸಂಧಿಸಿದಂತೆ ವರವರ ರಾವ್ ಅವರನ್ನು ಬಂಧಿಸಿರಲಿಲ್ಲ. ಆದರೆ ಕರ್ನಾಟಕ ಪೊಲೀಸರು ಪುಣೆಯಿಂದ ಕರೆತಂದು ಇಂದು ಪಾವಗಡ ಜೆಎಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.