ತುಮಕೂರು : ಕೊರೊನಾ ಸೋಂಕು ಕಾಲಿಟ್ಟಿದ್ದೆ ತಡ ಜನ ತಮ್ಮ ಆರೋಗ್ಯದ ಕುರಿತು ಇನ್ನಿಲ್ಲದ ಮುತುವರ್ಜಿ ವಹಿಸುತ್ತಿದ್ದಾರೆ. ಅದರಲ್ಲೂ ಕೆಲ ಜನ ವೈದ್ಯರ ಸಲಹೆಯಂತೆ ಹಸಿ ತರಕಾರಿ, ಕಾಳುಗಳನ್ನು ಸೇವಿಸುತ್ತಿದ್ದರೆ, ಇನ್ನೊಂದಿಷ್ಟು ಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡ್ರೈ ಫ್ರೂಟ್ಸ್ಗಳ ಸೇವನೆ ಮಾಡುತ್ತಿದ್ದಾರೆ.
ಈ ಮುಂಚೆ ಡ್ರೈ ಫ್ರೂಟ್ಸ್ ಅಂದ್ರೆ ಅದು ಕೇವಲ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವುದು ಅನ್ನೋ ಭಾವನೆ ಇತ್ತು. ಅದರಲ್ಲೂ ಸಾಮಾನ್ಯ ವರ್ಗದ ಜನ ಅದರತ್ತ ಸುಳಿಯುತ್ತಲೂ ಇರಲಿಲ್ಲ. ಆದರೀಗ ಮಹಾಮಾರಿಯ ವರ್ಚಸ್ಸು ಹೆಚ್ಚಾಗುತ್ತಾ ಹೋದಂತೆ ತುಮಕೂರಿನಲ್ಲಿ ಜನಸಾಮಾನ್ಯರೂ ಕೂಡ ರೋಗನಿರೋಧಕ ಶಕ್ತಿ ಬಯಸಿ ಇದರತ್ತ ಧಾವಿಸುತ್ತಿದ್ದಾರೆ.
ಕೊರೊನಾ ಸೋಂಕಿನ ಮೊದಲ ಅಲೆ ವೇಳೆ ನಿಧಾನವಾಗಿ ಜಾಗೃತರಾದ ತುಮಕೂರಿನ ಜನ 2ನೇ ಅಲೆ ವೇಳೆಗೆ ಇನ್ನಷ್ಟು ಎಚ್ಚೆತ್ತುಕೊಂಡಿದ್ದಾರೆ. ಇದ್ರಿಂದಾಗಿ ಅನೇಕ ಪ್ರೋಟಿನ್ ವಿಟಮಿನ್ಸ್‌ಗಳಿಂದ ಕೂಡಿರುವ ಡ್ರೈ ಪ್ರೋಟ್ಸ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಅಂಜೂರ, ವಾಲ್‌ನಟ್ ಹಾಗೂ ವಿದೇಶದಿಂದ ಸರಬರಾಜು ಆಗುವ ತರಹೇವಾರಿ ಖರ್ಜೂರಗಳನ್ನೂ ಖರೀದಿಸುತ್ತಿದ್ದಾರೆ.
ಕೊರೊನಾ ಕಾಲಿಟ್ಟ ಮೇಲೆ ಜನ ತಮ್ಮ ಆರೋಗ್ಯದ ಮೇಲೆ ನಿಧಾನವಾಗಿ ಕಾಳಜಿ ವಹಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಡ್ರೈ ಪ್ರೂಟ್ಸ್ ಅಂಗಡಿ ಮಾಲೀಕರಿಗೆ ಸಹಜವಾಗಿಯೇ ಉತ್ತಮ ವ್ಯಾಪಾರವಾಗುತ್ತಿದ್ರೆ, ಇನ್ನೊಂದೆಡೆ ಜನ ತಮ್ಮ ಆರೋಗ್ಯ ಹೆಚ್ಚಿಸಿಕೊಳ್ಳುತ್ತಿರುವುದಂತೂ ಸುಳ್ಳಲ್ಲ.
ಓದಿ: ಮೋದಿ ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿಗೆ ತಂದಿದ್ದಾರೆ: ಕೇಂದ್ರ ಸಚಿವ ಮುರಳಿಧರನ್