ETV Bharat / state

ವರುಣನ ಆಗಮನ.. ತುಮಕೂರು ಜಿಲ್ಲೆಯಲ್ಲಿ ಬಿರುಸುಗೊಂಡ ಕೃಷಿ ಚಟುವಟಿಕೆ - ತುಮಕೂರು ಜಿಲ್ಲೆಯಲ್ಲಿ ಮಳೆ

ರಾಜ್ಯಾದ್ಯಂತ ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಗರ ಪ್ರದೇಶಗಳಲ್ಲಿ ಕೆಲಸ ಇಲ್ಲದೆ ವಾಪಸ್ ತಮ್ಮ ಗ್ರಾಮಗಳಿಗೆ ಬಂದಿರುವ ಬಹುತೇಕ ಮಂದಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ..

tumkur
tumkur
author img

By

Published : May 8, 2021, 3:07 PM IST

ತುಮಕೂರು : ಜಿಲ್ಲೆಯ ಕೆಲವೆಡೆ ಮುಂಗಾರು ಪೂರ್ವ ಮಳೆ ಬೀಳುತ್ತಿದ್ದಂತೆ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.

ತಮ್ಮ ಜಮೀನು, ತೋಟಗಳಲ್ಲಿ ನೇಗಿಲು ಹಿಡಿದು ಭೂಮಿ ಹದ ಮಾಡುತ್ತಿದ್ದಾರೆ. ಜಿಲ್ಲೆಯ ಮಳೆಯಾಶ್ರಿತ ಕೃಷಿ ಭೂಮಿಗಳಲ್ಲಿ ರೈತರು ಅಲಸಂದೆ, ರಾಗಿ, ಹೆಸರುಕಾಳು, ತೊಗರಿ ಸೇರಿ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತೊಡಗಿಡಿದ್ದಾರೆ.

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಳೆದ ವರ್ಷ ಹೇಮಾವತಿ ನೀರು ಭರ್ಜರಿಯಾಗಿ ಹರಿದಿದೆ. ಭೂಮಿ ಸಹ ತೇವಾಂಶದಿಂದ ಕೂಡಿದೆ ಅಲ್ಲದೆ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ.

ರಾಜ್ಯಾದ್ಯಂತ ಕೊರೊನಾ ಲಾಕ್​ಡೌನ್​ ಹಿನ್ನೆಲೆ ನಗರ ಪ್ರದೇಶಗಳಲ್ಲಿ ಕೆಲಸ ಇಲ್ಲದೆ ವಾಪಸ್ ತಮ್ಮ ಗ್ರಾಮಗಳಿಗೆ ಬಂದಿರುವ ಬಹುತೇಕ ಮಂದಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಬಾರಿಯೂ ಕಳೆದ ಬಾರಿಯಂತೆ ಜಿಲ್ಲೆಯ ಬಹುಭಾಗದಲ್ಲಿರೋ ಪಾಳು ಬಿದ್ದಿರೋ ಕೃಷಿ ಭೂಮಿಯಲ್ಲಿಯೂ ಬಿತ್ತನೆ ಪ್ರಮಾಣ ಹೆಚ್ಚಾಗುವ ಅಂದಾಜು ಹೊಂದಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.