ETV Bharat / state

'ಕೇಂದ್ರದಿಂದ ನೆರೆ ಪರಿಹಾರ ತರಲಾಗದ ಶಕ್ತಿಹೀನ ವ್ಯಕ್ತಿ ಯಡಿಯೂರಪ್ಪ..'- ಮುರಳೀಧರ ಹಾಲಪ್ಪ

ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರದ ಬಗ್ಗೆ ಪ್ರಧಾನಿ ಬಳಿ ಹೋಗಿ ಮಾತನಾಡುವ ಧೈರ್ಯ ತೋರದ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಟಾಂಗ್​ ನೀಡಿದರು. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 2ರಂದು ತುಮಕೂರು ನಗರದ ಹರಿಜನ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಚರಿಸುವ ಮೂಲಕ ಗಾಂಧೀಜಿಯ 150ನೇ ಜನ್ಮದಿನವನ್ನು ಆಚರಿಸಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು.

ಕೇಂದ್ರದಿಂದ ನೆರೆ ಪರಿಹಾರ ಗಿಟ್ಟಿಸಿಕೊಳ್ಳಲಾಗದ ಶಕ್ತಿಹೀನ ವ್ಯಕ್ತಿ ಸಿಎಂ: ಮುರಳೀಧರ ಹಾಲಪ್ಪ
author img

By

Published : Sep 27, 2019, 1:45 PM IST

ತುಮಕೂರು: ಪಕ್ಷಾಂತರ ಮಾಡುವ, ಸರ್ಕಾರ ಪತನಗೊಳ್ಳಲು ಕಾರಣರಾಗಿರುವ ಪಕ್ಷಾಂತರಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಅಭಿಪ್ರಾಯಪಟ್ಟರು.

'ಕೇಂದ್ರದಿಂದ ನೆರೆ ಪರಿಹಾರ ಗಿಟ್ಟಿಸಿಕೊಳ್ಳಲಾಗದ ಶಕ್ತಿಹೀನ ವ್ಯಕ್ತಿ ಸಿಎಂ ಬಿಎಸ್‌ವೈ'..

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರದ ಬಗ್ಗೆ ಪ್ರಧಾನಿ ಬಳಿ ಹೋಗಿ ಮಾತನಾಡುವ ಧೈರ್ಯ ತೋರದ ಮುಖ್ಯಮಂತ್ರಿ ಯಡಿಯೂರಪ್ಪ. ಇನ್ನು, ಪಕ್ಷಾಂತರಿಗಳಿಗೆ ಟಿಕೆಟ್ ಕೊಡುವುದಾಗಿ ಹೇಳಿ ಸರ್ಕಾರ ಪತನಗೊಳಿಸಿ ಈಗ ಪಕ್ಷದ ಮುಖಂಡರಿಗೆ ಕೈಕೊಡುವ ಮೂಲಕ ಗೋಸುಂಬೆತನ ಪ್ರದರ್ಶಿಸುತ್ತಿದ್ದಾರೆ ಎಂದು ಟಾಂಗ್​ ನೀಡಿದರು. ಅಷ್ಟೇಅಲ್ಲ, ಬಿಜೆಪಿ ಮುಖಂಡರಿಗೆ ಸ್ವಾಭಿಮಾನ ಇರೋದೆಯಾದ್ರೆ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 2ರಂದು ತುಮಕೂರು ನಗರದ ಹರಿಜನ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಚರಿಸುವ ಮೂಲಕ ಗಾಂಧೀಜಿಯ 150ನೇ ಜನ್ಮದಿನವನ್ನು ಆಚರಿಸಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು. ಇನ್ನು, ರಾಜ್ಯದ ಹಲವು ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಕೇಂದ್ರ ಸಮಿತಿ ಮಾತ್ರ ರಾಜ್ಯಕ್ಕೆ ಭೇಟಿ ನೀಡಲು 20 ದಿನಗಳನ್ನು ತೆಗೆದುಕೊಂಡಿದೆ. ನಮ್ಮ ಪ್ರಧಾನಿ ಅಮೆರಿಕಾಗೆ ಹೋಗಿ ಅಲ್ಲಿನ ಪ್ರವಾಹ ಪೀಡಿತರಿಗೆ ಸಂತಾಪ ಸೂಚಿಸುತ್ತಾರೆ. ಆದರೆ, ನಮ್ಮ ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕನಿಷ್ಠ ಟ್ವೀಟ್ ಮಾಡುವ ಕಾಳಜಿಯನ್ನೂ ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಲು ಆಗದ ಶಕ್ತಿಹೀನ ಮುಖ್ಯಮಂತ್ರಿ ಪ್ರಸ್ತುತ ನಮ್ಮ ರಾಜ್ಯದಲ್ಲಿದ್ದಾರೆ. ಮೋದಿ ಗುಜರಾತಿಗೆ 4,000 ಕೋಟಿ ಮಹಾರಾಷ್ಟ್ರಕ್ಕೆ 5,000 ಕೋಟಿ ಪರಿಹಾರ ನೀಡಿದ್ದಾರೆ. ಆದರೆ, ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ. ಇನ್ನಾದರೂ ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸಿ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೆರೆ ಪರಿಹಾರಕ್ಕಾಗಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಯಿತು. ಎಸಿಪಿ/ಟಿಎಸ್ಪಿ ಹಣವನ್ನು ಬಳಸಲು ಯತ್ನಿಸಿದಾಗ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಆದರೂ ಕೇಂದ್ರ ಸರ್ಕಾರದಿಂದ ಬಿಡಿಗಾಸು ಕೂಡ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

Intro:ತುಮಕೂರು: ಪಕ್ಷಾಂತರ ಮಾಡುವ, ಸರ್ಕಾರ ಪತನಗೊಳ್ಳಲು ಕಾರಣವಾಗಿರುವ ಪಕ್ಷಾಂತರಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ತಿಳಿಸಿದರು.

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಉಂಟಾಗಿರುವ ನೆರೆ ಬಗ್ಗೆ ಪ್ರಧಾನಿ ಬಳಿ ಹೋಗಿ ಮಾತನಾಡುವ ಧೈರ್ಯ ತೋರದ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷಾಂತರಿಗಳಿಗೆ ಟಿಕೆಟ್ ಕೊಡುವುದಾಗಿ ಹೇಳಿ ಸರ್ಕಾರ ಪತನಗೊಳಿಸಿ ಈಗ ಪಕ್ಷದ ಮುಖಂಡರಿಗೆ ಕೈಕೊಡುವ ಮೂಲಕ ಗೋಸುಂಬೆತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ಮುಖಂಡರಿಗೆ ಸ್ವಾಭಿಮಾನ ಇದ್ದರೆ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 2ರಂದು ತುಮಕೂರು ನಗರದ ಹರಿಜನ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಚರಿಸುವ ಮೂಲಕ ಗಾಂಧಿ ಜಯಂತಿ ಆಚರಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವುದಕ್ಕಾಗಿ ತಾಲೂಕು ಮುಖಂಡರೊಂದಿಗೆ ಸಭೆಯನ್ನು ನಡೆಸಿ ಅಗತ್ಯವಿರುವ ಕಡೆ ಬ್ಲಾಕ್ ಕಾಂಗ್ರೆಸ್ ಪುನರ್ ರಚನೆ ಮಾಡಲಾಗುವುದು ಎಂದರು.
ಬೈಟ್: ಆರ್. ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.
ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ರಾಜ್ಯದ 22 ಜಿಲ್ಲೆ ನೆರೆಗೆ ತುತ್ತಾಗಿವೆ, ಕೇಂದ್ರ ಸಮಿತಿ ರಾಜ್ಯಕ್ಕೆ ಬರಲು 20 ದಿನಗಳನ್ನು ತೆಗೆದುಕೊಂಡಿದೆ. ನಮ್ಮ ಪ್ರಧಾನಿ ಅಮೇರಿಕಾಕ್ಕೆ ಹೋಗಿ ಅಲ್ಲಿನ ಪ್ರವಾಹ ಪೀಡಿತರಿಗೆ ಸಂತಾಪ ಸೂಚಿಸುತ್ತಾರೆ, ನಮ್ಮ ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕನಿಷ್ಠ ಟ್ವಿಟ್ ಮಾಡುವ ಕಾಳಜಿಯನ್ನು ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಲು ಆಗದ ಶಕ್ತಿಹೀನ ಮುಖ್ಯಮಂತ್ರಿ ರಾಜ್ಯದಲ್ಲಿದ್ದಾರೆ. ಮೋದಿ ಗುಜರಾತಿಗೆ 4,000 ಕೋಟಿ ಮಹಾರಾಷ್ಟ್ರ 5,000 ಕೋಟಿ ಅನುದಾನವನ್ನು ನೀಡಿದ್ದಾರೆ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುವ ಮೋದಿಯವರು ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸಲಿ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೆರೆ ಪರಿಹಾರಕ್ಕಾಗಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಯಿತು, ಎಸಿಪಿ/ಟಿಎಸ್ಪಿ ಹಣವನ್ನು ಬಳಸಲು ಯತ್ನಿಸಿದಾಗ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು ಆದರೂ ಕೇಂದ್ರ ಸರ್ಕಾರದಿಂದ ಬಿಡಿಗಾಸೂ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೈಟ್: ಮುರುಳೀಧರ ಹಾಲಪ್ಪ, ಕೆಪಿಸಿಸಿ ವಕ್ತಾರ

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.