ತುಮಕೂರು: ಭಾರಿ ಗಾಳಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆಯೋರ್ವರು ಹಾಗೂ ಮೂರು ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮ್ಮ (60) ಮೃತ ವೃದ್ಧೆ. ಇಂದು ಸಂಜೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದಿಗೆರೆಯಲ್ಲಿ ಭಾರಿ ಮಳೆಯಾಗಿತ್ತು. ಮಳೆ ಗಾಳಿಗೆ ಹಾಲೋ ಬ್ರಿಕ್ಸ್ ನಿಂದ ನಿರ್ಮಿಸಲಾಗಿದ್ದ ಬೃಹತ್ ಗೋಡೆ ಕುಸಿದು ಬಿದ್ದಿದೆ.
ಈ ವೇಳೆ ಸಮೀಪದಲ್ಲಿದ್ದ ಸುಮಾರು 60 ವರ್ಷದ ಚಿಕ್ಕಮ್ಮ ಎಂಬುವವ ಮೇಲೆ ಗೋಡೆ ಉರುಳಿ ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ. ಇದರ ಜೊತೆಗೆ 3 ಕುರಿಗಳು ಸಹ ಮೃತಪಟ್ಟಿವೆ.